alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲ್ ಹೊಸ ಪಕ್ಷ ಘೋಷಣೆಗೆ ಕೊನೆಗೂ ಕೂಡಿ ಬಂತು ಮುಹೂರ್ತ

ನಟ ಕಮಲ್ ಹಾಸನ್ ಕೂಡ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. ಫೆಬ್ರವರಿ 21ರಂದು ತಮಿಳುನಾಡಿನ ರಾಮನಾಥಪುರಂನಲ್ಲಿ ಕಮಲ್ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಅಂದಿನಿಂದ್ಲೇ ರಾಜ್ಯಾದ್ಯಂತ ಪ್ರವಾಸ ಕೂಡ ಕೈಗೊಳ್ಳಲಿದ್ದಾರೆ.

ರಾಮನಾಥಪುರಂ ಕಮಲ್ ಹಾಸನ್ ರ ತವರು. ಹಾಗಾಗಿ ಅಲ್ಲಿಂದ್ಲೇ ತಮ್ಮ ರಾಜಕೀಯ ಜರ್ನಿ ಆರಂಭಿಸಲಿರೋ ಅವರು ನಂತರ ಮಧುರೈ, ದಿಂಡಿಗಲ್, ಶಿವಗಂಗೈ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ತಮ್ಮ ಪಕ್ಷದ ಹೆಸರಿನ ಜೊತೆಗೆ ಧ್ಯೇಯೋದ್ದೇಶಗಳನ್ನೂ ಜನರ ಮುಂದಿಡುವುದಾಗಿ ಅವರು ತಿಳಿಸಿದ್ದಾರೆ.

ಜನರ ಸಮಸ್ಯೆ, ಕಷ್ಟ ಕಾರ್ಪಣ್ಯ, ಅವಶ್ಯಕತೆಗಳು ಇವನ್ನೆಲ್ಲ ಅರಿತುಕೊಳ್ಳುವುದು ತಮ್ಮ ಪ್ರವಾಸದ ಉದ್ದೇಶ ಅಂತಾ ಹೇಳಿದ್ದಾರೆ. ಜನರನ್ನು ಅರ್ಥಮಾಡಿಕೊಳ್ಳಲು ತಮಗೆ ಸಿಕ್ಕಿರೋ ಅವಕಾಶ ಇದು ಅಂತಾ ಬಣ್ಣಿಸಿದ್ದಾರೆ. ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ತಮ್ಮೊಂದಿಗೆ ಕೈಜೋಡಿಸಿ ಅಂತಾ ಜನರಿಗೆ ಕರೆ ಕೊಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...