alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯೋತ್ಸವದ ಪರೇಡ್ ನಲ್ಲಿ ಕಮಲ್-ಶ್ರುತಿ ಹಾಸನ್

ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 19 ರಂದು ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆಯಲಿರೋ ಪರೇಡ್ ನಲ್ಲಿ ನಟ, ರಾಜಕಾರಣಿ ಕಮಲ್ ಹಾಸನ್, ಕಮಲ್ ಪುತ್ರಿ ಶ್ರುತಿ ಹಾಸನ್ ಮತ್ತು ಕ್ರಿಕೆಟಿಗ ರಿಚರ್ಡ್ಸನ್ ವಿಶೇಷ ಗೌರವವನ್ನು ಪಡೆಯಲಿದ್ದಾರೆ.

ಭಾರತದ ಹೊರಗೆ ನಡೆಯುತ್ತಿರೋ ಅತ್ಯಂತ ವೈಭವೋಪೇತ ಪರೇಡ್ ನಲ್ಲಿ ಕಮಲ್, ಮಾರ್ಷಲ್ ಪರೇಡ್ ಗೌರವಕ್ಕೆ ಪಾತ್ರರಾದ್ರೆ ಶ್ರುತಿ ಹಾಸನ್ ಮತ್ತು ರಿಚರ್ಡ್ಸನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರಷ್ಟೇ ಅಲ್ಲ ಗಾಯಕ ಕೈಲಾಶ್ ಖೇರ್ ಮತ್ತು ಸೈಬಾನಿ ಕಶ್ಯಪ್ ಕೂಡ ಈ ಪರೇಡ್ ನ ವಿಶೇಷ ಅತಿಥಿಗಳಾಗಿ ಆಹ್ವಾನ ಪಡೆದಿದ್ದಾರೆ.

ಅಮೆರಿಕಾದ ಭಾರತೀಯರ ಒಕ್ಕೂಟ ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ಸ್ವಾತಂತ್ರ್ರೋತ್ಸವದ ಸಂಭ್ರಮವನ್ನ ಆಯೋಜಿಸಿದೆ. ಸುಮಾರು ಒಂದು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಭಾರತೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮ್ಯಾನ್ಹಟನ್ನ ಹಲವು ರಾಜಬೀದಿಗಳಲ್ಲಿ ಈ ಪರೇಡ್ ನಡೆಯಲಿದೆ.

ಬಿಹು ಮತ್ತು ಲಾವಣಿ ನೃತ್ಯಗಳ ಜೊತೆಗೆ ಟ್ಯಾಬ್ಲೂ ಪ್ರದರ್ಶನ ಮತ್ತು ವಿಶೇಷ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಏಷ್ಯಾ ಕೆರಿಬಿಯನ್ ನಾಡಿನ ಗಣ್ಯರು ಕೂಡ ಆಗಮಿಸಲಿದ್ದಾರೆ. ಶ್ರೀಲಂಕಾ ಮತ್ತು ನೇಪಾಳದ ಸಹವರ್ತಿಗಳು ಕೂಡ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಭಾರತದ ಹೊರಗೆ ನಡೆಯುತ್ತಿರೋ ಅತ್ಯಂತ ದೊಡ್ಡ ಭಾರತೀಯ ಕಾರ್ಯಕ್ರಮ ಇದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಾರ್ಯಕ್ರಮಕ್ಕೆ ಕಳೆದ ವರ್ಷ ಕೂಡ ಅನೇಕ ಭಾರತೀಯ ಖ್ಯಾತನಾಮರು ಆಗಮಿಸಿದ್ದರು. ಅರ್ಜುನ್ ರಾಮ್ ಪಾಲ್, ಅಭಿಷೇಕ್ ಬಚ್ಚನ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಸನ್ನಿ ಡಿಯೋಲ್ ಮತ್ತು ರವೀನಾ ಟಂಡನ್ 2017 ರ ಸಮಾರಂಭದಲ್ಲಿ ಭಾಗವಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...