alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕಮಲ್

ಖ್ಯಾತ ನಟ ಕಮಲ್ ಹಾಸನ್, ತಮಿಳು ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್-2 ನಿರೂಪಕರಾಗಿದ್ದು, ಕಾರ್ಯಕ್ರಮದ ವೇಳೆ ಟಾಸ್ಕ್ ಒಂದರಲ್ಲಿ ಕೇಳಿದ ಪ್ರಶ್ನೆ ಈಗ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಬಿಗ್ ಬಾಸ್ ಮನೆಯ ಸ್ಪರ್ಧಿಯೊಬ್ಬರಿಗೆ ಸರ್ವಾಧಿಕಾರಿಯಂತೆ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ಕಮಲಹಾಸನ್, ರಾಜ್ಯವನ್ನಾಳಿದ ಸರ್ವಾಧಿಕಾರಿಗಳ ಗತಿ ಏನಾಯಿತೆಂಬುದು ನಿನಗೆ ಗೊತ್ತೇ ಎಂದು ಕೇಳಿದ್ದರು.

ಇದಕ್ಕೆ ತಕರಾರು ತೆಗೆದಿರುವ ವಕೀಲೆಯೊಬ್ಬರು, ಇದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರಲ್ಲದೆ, ನೂತನ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ ಹಾಸನ್ ಈ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ನಿಷೇಧಿಸಬೇಕೆಂದು ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...