alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಗಾರ್ತಿಯಾಗಲಿದ್ದಾಳೆ ಕಾಜೋಲ್

kajol

ಅನೇಕ ದಿನಗಳ ನಂತ್ರ ‘ದಿಲ್ವಾಲೆ’ ಮೂಲಕ ಬಾಲಿವುಡ್ ಗೆ ವಾಪಸ್ ಬಂದ ನಟಿ ಕಾಜೋಲ್ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲಿದ್ದಾಳೆ. ಆದ್ರೆ ಈ ಬಾರಿ ಬಾಲಿವುಡ್ ಬದಲು ತಮಿಳು ಚಿತ್ರಕ್ಕಾಗಿ ಕಾಜೋಲ್ ಬಣ್ಣ ಹಚ್ಚಲಿದ್ದಾಳೆ. ಇದು ಕಾಜೋಲ್ ಎರಡನೇ ತಮಿಳು ಚಿತ್ರವಾಗಿದೆ.

ಚಿತ್ರಕ್ಕೆ ‘ವಿಐಪಿ’ ಎಂದು ಹೆಸರಿಡಲಾಗಿದೆ. ವಿಐಪಿ ಸಸ್ಪೆನ್ಸ್, ಕೊಲೆ ರಹಸ್ಯವನ್ನು ಹೊರ ಹಾಕುವ ಚಿತ್ರವಾಗಿದೆ. ಸಿಂಗಲ್ ಮದರ್ ಪಾತ್ರದಲ್ಲಿ ಕಾಜೋಲ್ ಕಾಣಿಸಿಕೊಳ್ಳಲಿದ್ದಾಳೆ. ಈ ಹಿಂದೆ ಬಾಲಿವುಡ್ ಚಿತ್ರ ‘ಗುಪ್ತ್’ ನಲ್ಲಿ ಕಾಜೋಲ್ ಖಳನಾಯಕಿ ಪಾತ್ರದಲ್ಲಿ ನಟಿಸಿದ್ದಳು.

ಬಾಬಿ ಡಿಯೋಲ್ ಹಾಗೂ ಮನಿಷಾ ಕೊಯಿರಾಲಾ ಕೂಡ ಈ ಚಿತ್ರದಲ್ಲಿದ್ದರು. ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡ ಕಾಜೋಲ್ ಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಈಗ ತಮಿಳು ಚಿತ್ರದಲ್ಲಿ ಅಂತಹದ್ದೇ ಪಾತ್ರದಲ್ಲಿ ಕಾಜೋಲ್ ನಟಿಸಲಿದ್ದು, ಅಭಿಮಾನಿಗಳು ಎಷ್ಟು ಮಾರ್ಕ್ಸ್ ನೀಡ್ತಾರೆ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...