alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳ ಬಳಿಕ ಮತ್ತೇ ಕಾಲಿವುಡ್ ಗೆ ಕಾಜೋಲ್

kajol

ತಮಿಳಿನ ಸೂಪರ್ ಸ್ಟಾರ್ ಧನುಷ್ ರ ‘ವಿಐಪಿ 2’ ಚಿತ್ರದ ಮೂಲಕ ನಟಿ ಕಾಜೋಲ್ ತಮಿಳು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಿದ್ದಾರೆ.

ಸುಮಾರು 2 ದಶಕಗಳ ಬಳಿಕ ಕಾಜೋಲ್ ತಮಿಳು ಚಿತ್ರದಲ್ಲಿ ನಟಿಸ್ತಾ ಇರೋದು ವಿಶೇಷ. 1997 ರಲ್ಲಿ ಪ್ರಭುದೇವ ಹಾಗೂ ಅರವಿಂದ್ ಸ್ವಾಮಿ ಅಭಿನಯದ ‘ಮಿನ್ಸರ ಕನವು’ ಚಿತ್ರದ ಮೂಲಕ ಕಾಜೋಲ್ ಕಾಲಿವುಡ್ ಗೆ ಪಾದಾರ್ಪಣೆ ಮಾಡಿದ್ರು.

ಇದೀಗ ಸೂಪರ್ ಹಿಟ್ ಚಿತ್ರ ‘ವಿಐಪಿ’ಯ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನುಷ್ ಜೊತೆ ಕಾಜೋಲ್ ಅಭಿನಯಿಸ್ತಾ ಇರೋದು ಇದೇ ಮೊದಲ ಬಾರಿ. ರಜನೀಕಾಂತ್ ಪುತ್ರಿ ಸೌಂದರ್ಯ ಈ ಚಿತ್ರದ ನಿರ್ದೇಶಕಿ. ಧನುಷ್ ಈ ಚಿತ್ರದ ನಿರ್ಮಾಪಕರೂ ಹೌದು, ಜೊತೆಗೆ ಕಥೆ ಹಾಗೂ ಸಂಭಾಷಣೆಯನ್ನೂ ಬರೆದಿದ್ದಾರೆ. ಅಮಲಾ ಪೌಲ್, ವಿವೇಕ್, ಶರಣ್ಯ ಪೊನ್ವಣ್ಣನ್ ಕೂಡ ‘ವಿಐಪಿ 2’ ಸಿನೆಮಾದಲ್ಲಿ ನಟಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...