alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ‘ರಹಸ್ಯ’ ಬಹಿರಂಗಪಡಿಸಿದ ಕಾಜೋಲ್

kojolmn

ಬಾಲಿವುಡ್ ಸಿನಿಮಾರಂಗದಲ್ಲಿ ಉನ್ನತ ಹಂತದಲ್ಲಿದ್ದಾಗಲೇ ಮದುವೆಯಾದ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. ಮದುವೆಯ ನಂತರವೂ ಇಬ್ಬರೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಕಾಜೋಲ್ ತಮ್ಮ ಮದುವೆಯ ಬಗ್ಗೆ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಕಾಜೋಲ್ ಇತ್ತೀಚೆಗೆ ಶಾರುಖ್ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅಜಯ್ ದೇವಗನ್ ಕುರಿತ ಕೆಲವು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಅವರು ಮತ್ತೊಂದು ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಅಜಯ್ ದೇವಗನ್ ಅವರನ್ನು ಪ್ರೀತಿಸುತ್ತಿದ್ದ ಅವರು ಮದುವೆಯಾಗಲು ಒಂದು ಷರತ್ತು ವಿಧಿಸಿದ್ದರಂತೆ. ಅದರಂತೆ ಮದುವೆಗೆ ಮೊದಲು ಅಮೂಲ್ಯ, ಸುಂದರ ಗ್ರಂಥಾಲಯವನ್ನು ಉಡುಗೊರೆಯಾಗಿ ನೀಡಲು ಕೇಳಿಕೊಂಡಿದ್ದರಂತೆ. ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ ಕಾಜೋಲ್.

ಲೇಖಕ ಅಶ್ವಿನ್ ಸಾಂಗಿ ಅವರು ರಚಿಸಿರುವ ‘ದಿ ಸಿಯಾಲ್ ಕೋಟ್ ಸಾಗಾ’ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕಾಜೋಲ್, ಮದುವೆಗೆ ಮೊದಲು ಮೌಲ್ಯಯುತ ಲೈಬ್ರರಿಯನ್ನು ಕೊಡುಗೆಯಾಗಿ ನೀಡಲು ಕೇಳಿಕೊಂಡಿದ್ದೆ. ಆದರೆ, ಮದುವೆಯಾದ ಬಳಿಕ ಆ ಉಡುಗೊರೆ ಹನಿಮೂನ್ ದಿನ ಸಿಕ್ಕಿತೆಂದು ಹೇಳಿಕೊಂಡಿದ್ದಾರೆ. ತಮಗೆ ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಇದ್ದು, ಈಗಲೂ ಪುಸ್ತಕಗಳನ್ನು ಓದುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...