alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ರಜನಿಯ ‘ಕಬಾಲಿ’

rajinikanth_kabaliತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ‘ಕಬಾಲಿ’ ಟೀಸರ್ ಬಿಡುಗಡೆಗೊಂಡ ಬಳಿಕ ದಾಖಲೆ ಸಂಖ್ಯೆಯಲ್ಲಿ ಅದನ್ನು ವೀಕ್ಷಿಸಲಾಗಿದ್ದು, ಇದೀಗ ಮತ್ತೊದು ದಾಖಲೆಗೆ ‘ಕಬಾಲಿ’ ಪಾತ್ರವಾಗಿದೆ.

‘ಕಬಾಲಿ’ ಚಿತ್ರ ಮಲಯಾ ಭಾಷೆಗೆ ಡಬ್ ಆಗುತ್ತಿದೆ ಎನ್ನಲಾಗಿದ್ದು, ಈ ಮೂಲಕ ತಮಿಳು ಚಿತ್ರವೊಂದು ಮಲಯಾ ಭಾಷೆಗೆ ಡಬ್ ಆದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಲೇಶಿಯಾದಲ್ಲಿ ರಜನಿಕಾಂತ್, ಆಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಕಾರಣಕ್ಕಾಗಿ ಮಲಯಾ ಭಾಷೆಗೆ ಡಬ್ ಮಾಡಲಾಗುತ್ತಿದೆ ಎನ್ನಲಾಗಿದೆ.

ಮಲೇಶಿಯಾದ ಮೀಡಿಯಾ ಕಂಪನಿ, ಮಲ್ಲಿಕ್ ಸ್ಟ್ರೀಮ್ ಪ್ರೊಡಕ್ಷನ್ಸ್ ಅಂಡ್ ಡಿಸ್ಟ್ರಿಬ್ಯೂಷನ್ ಇದರ ಹಕ್ಕುಗಳನ್ನು ಪಡೆದಿದೆ ಎನ್ನಲಾಗಿದ್ದು, ಕಂಪನಿಯ ಸಾಮಾಜಿಕ ಜಾಲತಾಣದಲ್ಲಿ ಮಲಯಾ ಭಾಷೆಯಲ್ಲಿರುವ ‘ಕಬಾಲಿ’ ಟೀಸರ್ ಅನ್ನು ಅಪ್ ಲೋಡ್ ಮಾಡಲಾಗಿದೆ. ರಜನಿಕಾಂತ್, ರಾಧಿಕಾ ಆಪ್ಟೆ, ದಿನೇಶ್ ರವಿ, ಜಾನ್ ವಿಜಯ್ ಪ್ರಮುಖ ತಾರಾಂಗಣದಲ್ಲಿರುವ ಈ ಚಿತ್ರವನ್ನು ರಂಜಿತ್ ನಿರ್ದೇಶಿಸಿದ್ದು, ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...