alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ನಿಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರ ‘ಕಾಲಾ’ ತೆರೆಗೆ ಬಂದಿದೆ. ಗುರುವಾರ ಬೆಳಿಗ್ಗೆ 4 ಗಂಟೆಗೆ ಚಿತ್ರ ಪ್ರದರ್ಶನ ಶುರುವಾಯ್ತು. ಚಿತ್ರ ಪ್ರದರ್ಶನಕ್ಕೂ ಮುನ್ನ ಅಭಿಮಾನಿಗಳು ತಲೈವಾರ ಪೋಸ್ಟರ್ ಗೆ ಹಾಲಿನ ಮಹಾ ಅಭಿಷೇಕ ಮಾಡಿದ್ರು.

ಇದು ಮೊದಲೇನಲ್ಲ. ರಜನಿಕಾಂತ್ ಪ್ರತಿ ಚಿತ್ರ ಬಿಡುಗಡೆ ವೇಳೆಯೂ ರಜನಿ ಪೋಸ್ಟರ್ ಗೆ ಹಾಲಿನ ಅಭಿಷೇಕ ನಡೆಯುತ್ತದೆ. ಕಾಲಾ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಟಿಕೆಟ್ ಸೋಲ್ಡ್ ಔಟ್ ಆಗಿದ್ದರೂ ಬೆಳಗಿನ ಜಾವ ನಾಲ್ಕು ಗಂಟೆಗೆ ಅನೇಕ ಥಿಯೇಟರ್ ಗಳ ಮುಂದೆ ಅಭಿಮಾನಿಗಳ ದಂಡು ನೆರೆದಿತ್ತು.

ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳು ಹಬ್ಬ ಆಚರಿಸಿದ್ದಾರೆ. ಥಿಯೇಟರ್ ಹೊರಗೆ ಹಾಗೂ ಒಳಗೆ ಅಭಿಮಾನಿಗಳು ಕುಣಿದು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ಕಬಾಲಿ ನಂತ್ರ ರಜನಿಕಾಂತ್ ಅಭಿನಯದ ಕಾಲಾದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಬಹು ದಿನಗಳಿಂದ ಕಾಯ್ತಿದ್ದ ಅಭಿಮಾನಿಗಳು ಈಗ ಖುಷಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...