alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ ಚಿತ್ರ ವೀಕ್ಷಿಸಲು ರಜೆ ಘೋಷಿಸಿದ ಐಟಿ ಕಂಪನಿ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಜೂನ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು, ಮೊದಲ ದಿನವೇ ವೀಕ್ಷಿಸುವ ಸಲುವಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ.

ಜಪಾನ್ ನಲ್ಲಿ ಈ ಚಿತ್ರ ಈಗಲೇ ತೆರೆಕಾಣುತ್ತಿಲ್ಲ ಎನ್ನಲಾಗಿದ್ದು, ಹೀಗಾಗಿ ರಜನಿಕಾಂತ್ ಅವರ ಕೆಲ ಜಪಾನ್ ಅಭಿಮಾನಿಗಳು ಚಿತ್ರ ವೀಕ್ಷಿಸುವ ಸಲುವಾಗಿಯೇ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಕೇರಳ ಮೂಲದ ಐಟಿ ಕಂಪನಿಯೊಂದು ತನ್ನ ನೌಕರರು ಮೊದಲ ದಿನವೇ ‘ಕಾಲಾ’ ಚಿತ್ರ ವೀಕ್ಷಿಸಲು ಅನುವಾಗುವಂತೆ ಜೂನ್ 7 ರಂದು ರಜೆ ಘೋಷಿಸಿದೆ. ಕಂಪನಿಯ ಸುತ್ತೋಲೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಪ ರಂಜೀತ್ ನಿರ್ದೇಶನದ ‘ಕಾಲಾ’ ಚಿತ್ರವನ್ನು ರಜನಿಕಾಂತ್ ಅವರ ಅಳಿಯ ಧನುಷ್ ನಿರ್ಮಿಸಿದ್ದಾರೆ. ಮುಂಬೈ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಹುಮಾ ಖುರೇಶಿ, ನಾನಾ ಪಾಟೇಕರ್ ಸೇರಿದಂತೆ ಹಲವರು ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...