alex Certify
ಕನ್ನಡ ದುನಿಯಾ       Mobile App
       

Kannada Duniya

ಜಸ್ಟಿನ್ ಬೀಬರ್ ಮಾಡಿದ್ದಾರೆ ಮಹಾ ಮೋಸ !

justin-bieber-gets-a-lot-of-love-from-india-201705-967667

ಜನಪ್ರಿಯ ಪಾಪ್ ಗಾಯಕ ಜಸ್ಟಿಬ್ ಬೀಬರ್ ಆಗಮನಕ್ಕಾಗಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಕಾದಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ನಿನ್ನೆ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾನ್ಸರ್ಟ್ ಗೆ ಬಂದಿದ್ರು. ಜಸ್ಟಿನ್ ಬೀಬರ್ ಹಾಡಿಗೆ ಕಿವಿಯಾಗಬೇಕು ಅನ್ನೋದಷ್ಟೆ ಅಭಿಮಾನಿಗಳ ಉದ್ದೇಶ. ಆದ್ರೆ ಯುವ ಗಾಯಕ ಮಾತ್ರ ಅಭಿಮಾನಿಗಳನ್ನು ಒಂದು ರೀತಿಯಲ್ಲಿ ವಂಚಿಸಿದ್ದಾರೆ. ಅಲ್ಲಿ ನೆರೆದಿದ್ದ ಜನರು, ಆಯೋಜಕರು ಮತ್ತು ಮಾಧ್ಯಮದವರನ್ನೆಲ್ಲ ಮೂರ್ಖರನ್ನಾಗಿ ಮಾಡಿದ್ದಾರೆ.

ಅಸಲಿಗೆ ಕಾನ್ಸರ್ಟ್ ನಲ್ಲಿ ಜಸ್ಟಿನ್ 21 ಹಾಡುಗಳನ್ನು ಹಾಡಬೇಕಿತ್ತು. ಆದ್ರೆ ಆತ ಹಾಡಿದ್ದು ಕೇವಲ ನಾಲ್ಕು ಹಾಡುಗಳನ್ನು ಮಾತ್ರ. ಉಳಿದ ಹಾಡುಗಳನ್ನೆಲ್ಲ ಹಿನ್ನೆಲೆಯಲ್ಲಿ ಪ್ರಸಾರ ಮಾಡಲಾಗಿದೆ. ತಾನೇ ಹಾಡಿದಂತೆ ಜಸ್ಟಿನ್ ನಾಟಕವಾಡಿದ್ದಾರೆ, ಕೇವಲ ಲಿಪ್ ಸಿಂಕ್ ಮಾಡಿದ್ದಾರೆ. ಕಾನ್ಸರ್ಟ್ ನಂತರ ಜಸ್ಟಿನ್ ಎಲ್ಲರನ್ನೂ ಫೂಲ್ ಮಾಡಿರೋ ವಿಷಯ ಬೆಳಕಿಗೆ ಬಂದಿದೆ. ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಜಸ್ಟಿನ್ ಬೀಬರ್ ಕಾರ್ಯಕ್ರಮದ ಟಿಕೆಟ್ ಪಡೆಯಲು ಜನರು ಮುಗಿಬಿದ್ದಿದ್ರು. ಕಾನ್ಸರ್ಟ್ ಟಿಕೆಟ್ ಬೆಲೆಯಂತೂ ಬಲು ದುಬಾರಿಯಾಗಿತ್ತು. ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಗೆ 5000 ರೂಪಾಯಿ ನಿಗದಿಪಡಿಸಲಾಗಿತ್ತು. ಇಷ್ಟೆಲ್ಲಾ ಕಷ್ಟಪಟ್ಟು ಕಾನ್ಸರ್ಟ್ ಗೆ ಬಂದ 45,000 ಜನರನ್ನು ಪಾಪ್ ಗಾಯಕ ಮೂರ್ಖರನ್ನಾಗಿ ಮಾಡಿದ್ದಾರೆ. ಜಸ್ಟಿನ್ ಬೀಬರ್ ಮಾಡಿರೋ ಈ ಕೃತ್ಯ ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...