alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರ ನೋಡಲು ಥಿಯೇಟರ್ ಗೆ ಬಂದಿದ್ದು ಒಬ್ಬ ವ್ಯಕ್ತಿ !

tu-cheej-badi-hai-mast-e1490186367663

ಟಾಪ್ ನಲ್ಲಿರುವ ನಿರ್ದೇಶಕರು ಮಾಡಿದ ಚಿತ್ರ ಕೂಡ ಫ್ಲಾಪ್ ಆಗೋದುಂಟು. ಇದಕ್ಕೆ ‘ಮಶಿನ್’ ಚಿತ್ರ ಉತ್ತಮ ಉದಾಹರಣೆ. ಬಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅಬ್ಬಾಸ್- ಮಸ್ತಾನ್ ಲೆಕ್ಕಾಚಾರವನ್ನು ಈ ಚಿತ್ರ ತಲೆಕೆಳಗೆ ಮಾಡಿದೆ.

ಅಬ್ಬಾಸ್ ಬರ್ಮಾವಾಲಾ ಮಗ ಮುಸ್ತಫಾ ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದಾರೆ. ಎಂ.ಎಸ್.ಧೋನಿ ಚಿತ್ರದಲ್ಲಿ ಸಾಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಕೈರಾ ಅಡ್ವಾಣಿ ಹಿರೋಯಿನ್ ಪಾತ್ರದಲ್ಲಿ ಮಿಂಚಿದ್ದಾಳೆ. ವಿಮರ್ಶಕರ ಜೊತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ‘ಮಶಿನ್’ ಸಂಪೂರ್ಣವಾಗಿ ವಿಫಲವಾಗಿದೆ.

ಅಬ್ಬಾಸ್ ಸಾಕಷ್ಟು ಹಿಟ್ ಚಿತ್ರಗಳನ್ನು ಬಾಲಿವುಡ್ ಗೆ ನೀಡಿದ್ದಾರೆ. ಆದ್ರೆ ಅವರ ನಿರ್ದೇಶನದಲ್ಲಿ ತೆರೆಗೆ ಬಂದ ‘ಮಶಿನ್’ ಚಿತ್ರ ನೋಡಲು ಕೇವಲ ಒಬ್ಬ ಪ್ರೇಕ್ಷಕ ಮಾತ್ರ ಥಿಯೇಟರ್ ಗೆ ಬಂದಿದ್ದರಿಂದ ಚಿತ್ರ ಪ್ರದರ್ಶನವನ್ನು ಬಂದ್ ಮಾಡಲಾಗಿದೆ. ಕನಸಿನಲ್ಲಿಯೂ ಮಗನ ಮೊದಲ ಚಿತ್ರ ಇಷ್ಟರ ಮಟ್ಟಿಗೆ ಕಳಪೆಯಾಗಿರುತ್ತೆ ಎಂದು ಅಬ್ಬಾಸ್ ಎಣಿಸಿರಲಿಲ್ಲ.

ರೇಸ್, ಅಜನಬಿ, ಏತರಾಜ್, ಹಮ್ ರಾಜ್ ಹಾಗೂ ಬಾದ್ಶಾದಂತ ಚಿತ್ರಗಳನ್ನು ಬಾಲಿವುಡ್ ಗೆ ನೀಡಿದ್ದಾರೆ ಅಬ್ಬಾಸ್ ಮಸ್ತಾನ್. 25 ಕೋಟಿ ಖರ್ಚು ಮಾಡಿ ಚಿತ್ರ ನಿರ್ಮಾಣ ಮಾಡಲಾಗಿತ್ತು. ಮುಂಬೈ ಪಿವಿಆರ್ ಒಂದರಲ್ಲಿ ಚಿತ್ರ ನೋಡಲು ಕೇವಲ ಒಬ್ಬ ಪ್ರೇಕ್ಷಕ ಬಂದಿದ್ದಾನೆ. ಹಾಗಾಗಿ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಪಿವಿಆರ್ ಸಿಬ್ಬಂದಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...