alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಹಾಡಿಗೆ ಧ್ವನಿಯಾಗಲಿದ್ದಾರೆ ಜೂಹಿ

juhi-chawla-makes-her-singing-debut-in-kannada-with-her-next-filmಖ್ಯಾತ ನಟ ರವಿಚಂದ್ರನ್ ರ ಜೊತೆಗಿನ ‘ಪ್ರೇಮಲೋಕ’ ದ ಬಳಿಕ ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದ ನಟಿ ಜೂಹಿ ಚಾವ್ಲಾ ಈಗ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೇವಲ ಅಭಿನಯಿಸುತ್ತಿರುವುದಷ್ಟೇ ಅಲ್ಲ ಚಿತ್ರದ ಹಾಡಿಗೂ ಜೂಹಿ ಚಾವ್ಲಾ ಧ್ವನಿಯಾಗುತ್ತಿದ್ದಾರೆ. ಈ ಹಾಡಿನ ಧ್ವನಿಮುದ್ರಣ ಮುಂಬೈನಲ್ಲಿ ನಡೆಯಲಿದೆ.

ರಂಗಕರ್ಮಿ ಯಶವಂತ್ ಸರದೇಶ್ ಪಾಂಡೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ವೆರಿಗುಡ್ 10/10’ ಎಂಬ ಹೆಸರಿಡಲಾಗಿದ್ದು, ಇದು ಮಕ್ಕಳ ಚಿತ್ರವಾಗಿದೆ. ಈ ಚಿತ್ರದಲ್ಲಿ ಜೂಹಿ ಚಾವ್ಲಾ ಅವರದ್ದು ಸಂಗೀತ ಶಿಕ್ಷಕಿಯ ಪಾತ್ರ ಎನ್ನಲಾಗಿದೆ.

ವಿ. ಮನೋಹರ್ ಸಂಗೀತ ನಿರ್ದೇಶನವಿದ್ದು, ಜೂಹಿ ಚಾವ್ಲಾ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದರ ಚಿತ್ರೀಕರಣ ಯಲ್ಲಾಪುರದಲ್ಲಿ ನಡೆದಿದೆ. ಬಾಲಿವುಡ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದ ಜೂಹಿ ಚಾವ್ಲಾ ಈಗ ಕನ್ನಡ ಚಿತ್ರದಲ್ಲೂ ಹಾಡುತ್ತಿರುವುದು ವಿಶೇಷ. ಚಿತ್ರದ ಕುರಿತು ಮಾತನಾಡಿರುವ ಜೂಹಿ ಚಾವ್ಲಾ, ಇದೊಂದು ಮಕ್ಕಳ ಚಿತ್ರವಾಗಿದ್ದು, ಚಿತ್ರದಲ್ಲಿನ ನನ್ನ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...