alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಿರೂಪಣೆಯಲ್ಲಿ ಬಿಗ್ ಶಾಕ್! ಬದಲಾಗಲಿದ್ದಾರೆ ಸ್ಟಾರ್ ನಟ

ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ.

ತೆಲುಗಿನಲ್ಲಿಯೂ ‘ಬಿಗ್ ಬಾಸ್’ ಮೊದಲ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ನಿರೂಪಣೆ ಮಾಡಿದ್ದರು.

2 ನೇ ಸೀಸನ್ ನಲ್ಲಿ ಜೂನಿಯರ್ ಎನ್.ಟಿ.ಆರ್. ಬದಲಿಗೆ ಮತ್ತೊಬ್ಬ ಸ್ಟಾರ್ ಹೋಸ್ಟ್ ಮಾಡಲಿದ್ದಾರೆ. ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ಅಭಿನಯಿಸಬೇಕಿರುವುದು ಮತ್ತು ಕೌಟುಂಬಿಕ ಕಾರಣಗಳಿಂದ ಜೂನಿಯರ್ ಎನ್.ಟಿ.ಆರ್. ‘ಬಿಗ್ ಬಾಸ್’ ನಿಂದ ದೂರವಾಗುವ ಸಾಧ್ಯತೆ ಇದೆ.

ಹಾಗಾಗಿ ತೆಲುಗು ‘ಬಿಗ್ ಬಾಸ್’ ಸೀಸನ್ 2 ರಲ್ಲಿ ಬದಲಾವಣೆಯಾಗಲಿದ್ದು, ಜೂನಿಯರ್ ಎನ್.ಟಿ.ಆರ್. ಬದಲಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೋಸ್ಟ್ ಮಾಡಲಿದ್ದಾರೆ. ಅವರು ನಿರಾಕರಿಸಿದಲ್ಲಿ ನಾನಿ ನಿರೂಪಣೆ ಮಾಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...