alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಜಿಎಫ್ ನಲ್ಲಿ ಬಳಸಿಕೊಂಡ ಹಾಡು ರಿಮಿಕ್ಸ್ ಅಲ್ಲ….

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ನಲ್ಲಿ 70ರ ದಶಕದ ’ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ಬಳಸಿಕೊಂಡಿದ್ದು, ಅದನ್ನು ರಿಮಿಕ್ಸ್ ಮಾಡಲಾಗಿದೆ ಎಂಬ ಸುದ್ದಿಯಿತ್ತು. ಆದರೆ ಇದನ್ನು ಅಲ್ಲಗಳೆದಿರುವ ನಿರ್ದೇಶಕ ಪ್ರಶಾಂತ್ ನೀಲ್, ಹಾಡನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಹೊರತು ರಿಮಿಕ್ಸ್ ಮಾಡಿಲ್ಲ ಎಂದಿದ್ದಾರೆ.

ಡಾ.ರಾಜ್‌ಕುಮಾರ್‌ ಅಭಿನಯದ 70ರ ಪರೋಪಕಾರಿ ಸಿನಿಮಾದ ಸೂಪರ್‌ ಹಿಟ್‌ ಹಾಡಿಗೆ ಯಶ್‌ ಹಾಗೂ ತಮನ್ನಾ ನೃತ್ಯ ಮಾಡಿದ್ದಾರೆ. 70ರ ದಶಕದ ಕತೆಯನ್ನ ಹೇಳೋಕೆ ಹೊರಟಿರೋ ಚಿತ್ರ ಕೆಜಿಎಫ್. ಹಾಗಾಗಿ ಈ ಸಿನಿಮಾದ ಹಾಡುಗಳೂ ಕೂಡ ಅದೇ ಕಾಲಘಟ್ಟದಾಗಿರುತ್ತವೆ. ಜೋಕೆ ಹಾಡು 70ರ ದಶಕ್ಕದ್ದೇ ಆಗಿರೋದ್ರಿಂದ ಹಾಡನ್ನ ಬದಲಾಯಿಸದೇ ಅದನ್ನೇ ಬಳಸಿಕೊಳ್ಳಲಾಗಿದೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಇನ್ನು ಆಗಸ್ಟ್‌ 27ಕ್ಕೆ ಈ ಸಿನಿಮಾದ ಟೀಸರ್‌ ಬಿಡುಗಡೆ ಮಾಡಲು ನೀಲ್‌ ಯೋಜನೆ ರೂಪಿಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...