alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಾಪಕರಿಗೆ 10 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ ಜೋಗಿ ಪ್ರೇಮ್…?

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರಂತಹ ಖ್ಯಾತ ನಟರಿದ್ದರೂ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಚಿತ್ರ ಬಿಡುಗಡೆಯಾದ ವೇಳೆ ಕೆಲವರು ಮಾಡಿದ ನೆಗೆಟಿವ್ ಕಮೆಂಟ್ ಕೂಡ ಇದಕ್ಕೆ ಕಾರಣವಾಗಿತ್ತು.

ಇದೀಗ ಜೋಗಿ ಪ್ರೇಮ್ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ನಿರ್ಮಾಪಕ ಶ್ರೀನಿವಾಸ್, ಜೋಗಿ ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎಂದು ಕರೆದಿದ್ದು, 10 ಲಕ್ಷ ಪಡೆದು 14 ವರ್ಷಗಳಾದರೂ ಸಿನಿಮಾನೂ ಮಾಡಿಕೊಟ್ಟಿಲ್ಲ. ಹಣವನ್ನೂ ವಾಪಸ್ ಮಾಡಿಲ್ಲ ಎಂದಿದ್ದಾರೆ.

ಪ್ರೇಮ್ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಬಹಳಷ್ಟು ಬಾರಿ ಒತ್ತಾಯಿಸಿದಾಗ 2 ಲಕ್ಷ ಮಾತ್ರ ಕೊಟ್ಟಿದ್ದಾರೆ ಎಂದು ಶ್ರೀನಿವಾಸ್ ಹೇಳಿದ್ದು, ಇದಕ್ಕೆ ಜೋಗಿ ಪ್ರೇಮ್ ಏನು ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...