
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಜೋದ್ಪುರ ಸೆಷನ್ಸ್ ಹಾಗೂ ಜಿಲ್ಲಾ ನ್ಯಾಯಾಲಯ ಭಾರತದಿಂದ ಸಲ್ಮಾನ್ ಹೊರಗೆ ಹೋಗಬಹುದೆಂದು ತೀರ್ಪು ನೀಡಿದೆ.
ಕೋರ್ಟ್ ತೀರ್ಪಿನ ಮೇರೆಗೆ ಸಲ್ಮಾನ್ ಖಾನ್ ಮೇ 25 ರಿಂದ ಜುಲೈ 10 ರೊಳಗೆ ಕೆನಡಾ, ನೇಪಾಳ ಮತ್ತು ಅಮೆರಿಕಾಕ್ಕೆ ಹೋಗಬಹುದಾಗಿದೆ. ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಸೆಷನ್ಸ್ ಕೋರ್ಟ್ ನಲ್ಲಿ ಸಲ್ಮಾನ್ ಖಾನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿದೇಶಕ್ಕೆ ಸಲ್ಲು ಹೋಗಬಹುದು ಎಂದಿದೆ.
20 ವರ್ಷಗಳ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋದ್ಪುರ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡು ದಿನ ಸಲ್ಮಾನ್ ಜೈಲಿನಲ್ಲಿದ್ದರು. ನಂತ್ರ 10,000 ರೂ. ದಂಡ ಹಾಗೂ ಷರತ್ತಿನ ಮೇಲೆ ಜಾಮೀನು ನೀಡಿತ್ತು.