alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಬಾಲಿವುಡ್ ಗೆ ಜೆಕೆ

‘ಬಿಗ್ ಬಾಸ್’ ಸೀಸನ್ -5 ರಲ್ಲಿ ಫಿನಾಲೆವರೆಗೂ ಬಂದು 3 ನೇ ಸ್ಥಾನ ಗಳಿಸಿದ್ದ ನಟ ಜಯರಾಮ್ ಕಾರ್ತಿಕ್(ಜೆ.ಕೆ.) ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಈಗಾಗಲೇ ‘ಸೀಯಾ ಕಾ ರಾಮ್’ ಹಿಂದಿ ಧಾರಾವಾಹಿಯಲ್ಲಿ ಅಮೋಘ ಅಭಿನಯ ನೀಡಿದ್ದ ಜೆ.ಕೆ. ಈಗ ಬಾಲಿವುಡ್ ನಲ್ಲಿ ಮಿಂಚಲಿದ್ದಾರೆ. ‘ಬಿಗ್ ಬಾಸ್’ನಿಂದ ಬಂದ ಬಳಿಕ ‘ಮೇ ಫಸ್ಟ್’, ‘ವಾರೆಂಟ್’’ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಎರಡೂ ಚಿತ್ರಗಳು ‘ಬಿಗ್ ಬಾಸ್’ಗೆ ಹೋಗುವ ಮೊದಲೇ ಆರಂಭವಾಗಿದ್ದವು.

‘ಬಿಗ್ ಬಾಸ್’ನಲ್ಲಿ ಸಹ ಸ್ಪರ್ಧಿಯಾಗಿದ್ದ ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ‘ಕರಾಳ ರಾತ್ರಿ’ ಮತ್ತು ‘ಪುಟ 109’ ಚಿತ್ರಗಳಲ್ಲಿ ಜೆ.ಕೆ. ಅಭಿನಯಿಸಲಿದ್ದಾರೆ. ಇದರಲ್ಲಿ 1 ಚಿತ್ರದಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ಅನುಪಮಾ ಗೌಡ ನಾಯಕಿಯಾಗಿದ್ದಾರೆ.

ಬಾಲಿವುಡ್ ನಲ್ಲಿಯೂ ಜೆ.ಕೆ. 2 ಚಿತ್ರಗಳು ಸೆಟ್ಟೇರಲಿವೆ. ದಿನಕರ್ ಕಪೂರ್ ನಿರ್ದೇಶನದ ಚಿತ್ರದಲ್ಲಿ ಜೆ.ಕೆ. ಅಭಿನಯಿಸಲಿದ್ದು, ಇದರಲ್ಲಿ ಹಾಸ್ಯ ಕೃಷ್ಣ ಅಭಿಷೇಕ್ ಮೊದಲಾದವರು ಅಭಿನಯಿಸಲಿದ್ದಾರೆ. ಥ್ರಿಲ್ಲರ್ ಸಿನಿಮಾ ಇದಾಗಿದೆ. ದೀಪಕ್ ತಲ್ವಾರ್ ನಿರ್ದೇಶನದ ಚಿತ್ರದಲ್ಲಿಯೂ ಜೆ.ಕೆ. ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...