alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಬಾಹುಬಲಿ’ಯ ಈ ಭರ್ಜರಿ ವಿಡಿಯೊ

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ ‘ಬಾಹುಬಲಿ -2’. ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.

‘ಬಾಹುಬಲಿ -2’ ಸಿನಿಮಾವನ್ನು ಡ್ಯಾನ್ಸ್ ಮೂಲಕ ಪ್ರಸ್ತುತಪಡಿಸಲಾಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಿಂಗ್ ಯುನೈಟೆಡ್ ನೇಷನ್ ಯುಟ್ಯೂಬ್ ಖಾತೆಯಲ್ಲಿ ‘ಜಿಯೊ ರೆ ಬಾಹುಬಲಿ’ ಡ್ಯಾನ್ಸ್ ವಿಡಿಯೊ ಭಾರೀ ಸೌಂಡ್ ಮಾಡ್ತಿದೆ. ವಾಹಿನಿಯೊಂದರ ‘ಡ್ಯಾನ್ಸ್ ಚಾಂಪಿಯನ್ ಶಿಪ್’ ರಿಯಾಲಿಟಿ ಶೋನಲ್ಲಿ ಕಿಂಗ್ಸ್ ಯುನೈಟೆಡ್ ನೇಷನ್ ಟೀಂ ಡ್ಯಾನ್ಸ್ ಪ್ರದರ್ಶನ ನೀಡಿದ್ದು, ‘ಬಾಹುಬಲಿ -2’ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.

ಅದ್ಭುತವಾಗಿ ಮೂಡಿ ಬಂದಿರುವ ಈ ಡ್ಯಾನ್ಸ್ ಗೆ ತೀರ್ಪುಗಾರರು, ವೀಕ್ಷಕರು ಫಿದಾ ಆಗಿದ್ದಾರೆ. ಜಾಲತಾಣದಲ್ಲಿಯೂ ಈ ಡ್ಯಾನ್ಸ್ ಮೋಡಿ ಮಾಡಿದೆ. ಇದುವರೆಗೆ 7.80 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...