alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ತಾಗಿದೆ ‘ಜಾನಿ ಜಾನಿ ಎಸ್ ಪಪ್ಪಾ’ ಟೀಸರ್

‘ದುನಿಯಾ’ ವಿಜಯ್ ಅಭಿನಯದ ‘ಜಾನಿ ಮೇರಾ ನಾಮ್’ 2011 ರಲ್ಲಿ ತೆರೆ ಕಂಡು ಅಭಿಮಾನಿಗಳನ್ನು ಸೆಳೆದಿತ್ತು. ಅದರ ಮುಂದುವರೆದ ಭಾಗವಾಗಿ ಮೂಡಿ ಬಂದಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ 2 ನೇ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ಸೆಳೆದಿದೆ.

‘ದುನಿಯಾ ಟಾಕಿಸ್’ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಟೀಸರ್ ಸಖತ್ತಾಗಿದ್ದು ‘ತಿಥಿ’ ಖ್ಯಾತಿಯ ಗಡ್ಡಪ್ಪ ಮತ್ತು ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಅವರ ನಡುವಿನ ಸಂಭಾಷಣೆ ಟೀಸರ್ ನಲ್ಲಿದೆ.

ಚಿತ್ರದ ಬಗ್ಗೆ ಪ್ರಶ್ನಿಸುವ ಗಡ್ಡಪ್ಪ ಹೀರೋ ಯಾರು, ಹೀರೋಯಿನ್ ಯಾರು ಎಂದು ಕೇಳುತ್ತಾರೆ. ಇದಕ್ಕೆ ಪ್ರೀತಂ ಗುಬ್ಬಿ ಉತ್ತರಿಸಿದ ಬಳಿಕ ಒಳ್ಳೆದಾಗುತ್ತೆ ಎಂದು ಗಡ್ಡಪ್ಪ ಶುಭ ಹಾರೈಸಿದ್ದಾರೆ.

‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರವನ್ನು ‘ದುನಿಯಾ’ ವಿಜಯ್ ನಿರ್ಮಾಣ ಮಾಡಿದ್ದು, ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ವಿಜಯ್, ರಚಿತಾ ರಾಮ್ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...