alex Certify
ಕನ್ನಡ ದುನಿಯಾ       Mobile App
       

Kannada Duniya

ಧಡಕ್ ನಂತ್ರ ನಿರುದ್ಯೋಗಿಗಳಾದ ಜಾಹ್ನವಿ-ಇಶಾನ್…?

ಜಾಹ್ನವಿ ಕಪೂರ್ ಹಾಗೂ ಇಶಾನ್ ಅಭಿನಯದ ಧಡಕ್ ಚಿತ್ರ ಈವರೆಗೆ 60 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಜಾಹ್ನವಿ ಹಾಗೂ ಇಶಾನ್ ಅಭಿನಯವನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಆದ್ರೆ ಧಡಕ್ ಯಶಸ್ಸಿನ ನಂತ್ರ ಮುಂದೇನು ಎಂಬ ಪ್ರಶ್ನೆ ಇಬ್ಬರು ಕಲಾವಿದರನ್ನು ಕಾಡ್ತಿದೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಜಾಹ್ನವಿ ಹಾಗೂ ಇಶಾನ್ ಮುಂದೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದರು. ನಮ್ಮ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ. ಕೆಲವರು ಹೊಸ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಸುಳ್ಳು ಹೇಳ್ತಾರೆ. ಆದ್ರೆ ನನಗೆ ಹೀಗೆ ಹೇಳಲು ಮನಸ್ಸಿಲ್ಲವೆಂದು ಜಾಹ್ನವಿ ಹೇಳಿದ್ದಳು. ಇನ್ನು ಇಶಾನ್ ಕೂಡ ಇದೇ ಉತ್ತರ ನೀಡಿದ್ದ.

ಜಾಹ್ನವಿ-ಇಶಾನ್ ಉತ್ತರ ಕೇಳಿದ ನಿರ್ದೇಶಕ ಶಶಾಂಕ್, ಇಬ್ಬರ ನಟನೆ ನಂತ್ರ ನಿರ್ದೇಶಕರು ಸೂಕ್ತ ಕಥೆ ನೋಡಿ ಇವ್ರಿಗೆ ಆಫರ್ ನೀಡ್ತಾರೆಂದು ವಿಶ್ವಾಸದ ಮಾತುಗಳನ್ನಾಡಿದ್ದರು. ಆದ್ರೆ ಈವರೆಗೂ ಇಬ್ಬರ ಕೈಗೆ ಹೊಸ ಪ್ರಾಜೆಕ್ಟ್ ಸಿಕ್ಕಿಲ್ಲ. ಧಡಕ್ ಚಿತ್ರಕ್ಕೆ ಮಿಷನ್ ಇಮ್ಪಾಸಿಬಲ್ ಹೊಡೆತ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...