alex Certify
ಕನ್ನಡ ದುನಿಯಾ       Mobile App
       

Kannada Duniya

ಅಕೌಂಟ್ ಪಬ್ಲಿಕ್ ಮಾಡುವ ಮೊದಲು ವೈಯಕ್ತಿಕ ಫೋಟೋ ಡಿಲೀಟ್ ಮಾಡಿದ ನಟಿ

ಸುಲಭ ಪ್ರಚಾರಕ್ಕೆ ಸಾಮಾಜಿಕ ಜಾಲತಾಣದ ಬೆಸ್ಟ್. ಹಾಲಿವುಡ್ ನಿಂದ ಬಾಲಿವುಡ್ ಸೇರಿದಂತೆ ಕಿರುತೆರೆ ಕಲಾವಿದರು ಕೂಡ ಇದ್ರ ಸಹಾಯ ಪಡೆಯುತ್ತಿದ್ದಾರೆ. ಚಿತ್ರದ ಶೂಟಿಂಗ್ ನಿಂದ ಹಿಡಿದು ಪ್ರಚಾರದವರೆಗೆ ಎಲ್ಲ ವಿಷ್ಯವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಜೊತೆಗೆ ಅಭಿಮಾನಿಗಳಿಗೆ ಹತ್ರವಾಗಲು ಮುಂದಾಗ್ತಿದ್ದಾರೆ. ಇನ್ಸ್ಟ್ರಾಗ್ರಾಮ್, ಟ್ವೀಟರ್, ಫೇಸ್ಬುಕ್ ಈಗ ಸಾಮಾನ್ಯ ಸಂಗತಿಯಾಗಿದೆ.

ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿರುವ ಜಾಹ್ನವಿ ಕಪೂರ್ ಇನ್ಸ್ಟ್ರಾಗ್ರಾಮನ್ನು ಸಾರ್ವಜನಿಕಗೊಳಿಸಿದ್ದಾಳೆ. ಈ ಹಿಂದೆ ಜಾಹ್ನವಿ ಇನ್ಸ್ಟ್ರಾಗ್ರಾಮ್ ಅಕೌಂಟ್ ಖಾಸಗಿಯಾಗಿತ್ತು. ಅಕೌಂಟ್ ಸಾರ್ವಜನಿಕಗೊಳಿಸುವ ಮುನ್ನ ಕೆಲವೊಂದು ಫೋಟೋಗಳನ್ನು ಜಾಹ್ನವಿ ಡಿಲೀಟ್ ಮಾಡಿದ್ದಾಳಂತೆ.

ಧಡಕ್ ಚಿತ್ರ ಬಿಡುಗಡೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಜಾಹ್ನವಿ ಈ ವಿಷ್ಯವನ್ನು ಹೇಳಿದ್ದಾಳೆ. ಕೆಲ ಫೋಟೋಗಳನ್ನು ಡಿಲಿಟ್ ಮಾಡಿ ಇನ್ಸ್ಟ್ರಾಗ್ರಾಮ್ ಅಕೌಂಟನ್ನು ಸಾರ್ವಜನಿಕಗೊಳಿಸಿದ್ದೇನೆ. ಈ ಅಕೌಂಟ್ ಮೂಲಕ ಅಭಿಮಾನಿಗಳ ಜೊತೆ ನೇರವಾಗಿ ಮಾತನಾಡಬಹುದು ಎಂದು ಜಾಹ್ನವಿ ಹೇಳಿದ್ದಾಳೆ.

ಸದ್ಯ ಜಾಹ್ನವಿ 1.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಕೆಲ ದಿನಗಳ ಹಿಂದೆ ಜಾಹ್ನವಿ ತಾಯಿ ಶ್ರೀದೇವಿಗೆ ಸಂಬಂಧಿಸಿದಂತೆ ಸ್ಪೇಷಲ್ ಮೆಸ್ಸೇಜ್ ಮಾಡಿದ್ದಳು. ಈ ಮೂಲಕ ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ತೇನೆ ಎಂಬುದನ್ನು ಹೇಳಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...