alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ‘ಕಾಲಾ’ ಚಿತ್ರದ ಜೀಪ್ ನಂಬರ್ ಪ್ಲೇಟ್ ರಹಸ್ಯ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಮೊದಲ ಪೋಸ್ಟರ್ ಕಳೆದ ಮೇನಲ್ಲಿ ಬಿಡುಗಡೆಯಾಗಿತ್ತು. ವಿಕಟ ನಗೆ ನಗುತ್ತ ಮಹಿಂದ್ರಾ ಎಸ್ ಯು ವಿ ಮೇಲೆ ರಜನಿ ಕುಳಿತಿರೋ ಪೋಸ್ಟರ್ ಅದು.

ಆ ಕಾರಿನ ಮೇಲಿದ್ದ ನಂಬರ್ ಪ್ಲೇಟ್ MH 01 BR 1956. 1956, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ದರ್ಮಕ್ಕೆ ಮತಾಂತರವಾದ ವರ್ಷ. ಅಂಬೇಡ್ಕರ್ ತತ್ವಾದರ್ಶಗಳನ್ನು ಇಷ್ಟಪಡುವ ರಜನಿಕಾಂತ್, ಅದೇ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿದ್ದರು.

ಈಗ ‘ಕಾಲಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಮಹಿಂದ್ರಾ ಎಸ್ ಯು ವಿ ನಂಬರ್ ಪ್ಲೇಟ್ ಬದಲಾಗಿದೆ. MH 09 PR 1931 ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಎಂಎಚ್ 09 ಅಂದ್ರೆ ಮಹಾರಾಷ್ಟ್ರದ ಕೊಲ್ಹಾಪುರ ರಿಜಿಸ್ಟ್ರೇಶನ್ ನಂಬರ್.

ಮರಾಠಿ ವಾಪತ್ರಿಕೆ ‘ಮೂಕನಾಯಕ’ವನ್ನು ಅಲ್ಲಿಂದಲೇ ಅಂಬೇಡ್ಕರ್ ಆರಂಭಿಸಿದ್ದರು. 1931ರ ಏಪ್ರಿಲ್ 13ರಂದು ಜನತಾ ಪತ್ರಿಕೆಯಲ್ಲಿ ಅಂಬೇಡ್ಕರ್, ಭಗತ್ ಸಿಂಗ್ ರ ಬಗ್ಗೆ ಸಂಪಾದಕೀಯ ಬರೆದಿದ್ದರು. ಈಗ ಕಾಲಾ ಟೀಸರ್ ನಲ್ಲಿ ವಾಹನದ ಸಂಖ್ಯೆಯನ್ನು 1931 ಎಂದು ಬದಲಾಯಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...