alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೀ ಟೂ’ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ ಬಿ. ಜಯಶ್ರೀ

ಹಾಲಿವುಡ್ ನಲ್ಲಿ ಆರಂಭವಾದ ಲೈಂಗಿಕ ಕಿರುಕುಳದ ಕುರಿತಾದ ‘ಮೀ ಟೂ’ ಅಭಿಯಾನ ಬಾಲಿವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಈಗ ಸ್ಯಾಂಡಲ್ ವುಡ್ ನಲ್ಲೂ ತಲ್ಲಣವನ್ನುಂಟು ಮಾಡಿದೆ.

ನಟಿ ಸಂಗೀತಾ ಭಟ್ ಮೊದಲು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಬಳಿಕ ಮತ್ತೊಬ್ಬ ನಟಿ ಸಂಜನಾ ಇದಕ್ಕೆ ಧ್ವನಿಗೂಡಿಸಿದ್ದರು. ಆ ಬಳಿಕ ಸಂಜನಾ ತಮ್ಮ ಆರೋಪದ ಕುರಿತು ಕ್ಷಮೆಯನ್ನೂ ಯಾಚಿಸಿದ್ದರು.

ಇದೀಗ ಹಿರಿಯ ನಟಿ ಬಿ ಜಯಶ್ರೀ ಈ ಕುರಿತು ಮಾತನಾಡಿದ್ದು, ತಮಗೂ ‘ಮೀ ಟೂ’ ಅನುಭವವಾಗಿದೆ ಎಂದು ಹೇಳುವ ಮೂಲಕ ಬೆಚ್ಚಿ ಬೀಳಿಸುವ ಸಂಗತಿಯನ್ನು ತೆರೆದಿಟ್ಟಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಬಿ. ಜಯಶ್ರೀ, ತಮಗೆ ನ್ಯಾಯ ಸಿಗಲೆಂದು ಈ ವಿಚಾರವನ್ನು ಹೇಳುತ್ತಿಲ್ಲ. ಬದಲಾಗಿ ಬೇರೆಯವರಿಗೂ ಈ ರೀತಿ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ಬಹಿರಂಗಪಡಿಸಿದ್ದೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...