alex Certify ರೇಖಾ – ಅಮಿತಾಬ್ ʼಪ್ರೀತಿʼ ನೋಡಿ ಕಣ್ಣೀರಿಟ್ಟಿದ್ದರಂತೆ ಜಯಾ ಬಚ್ಚನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಖಾ – ಅಮಿತಾಬ್ ʼಪ್ರೀತಿʼ ನೋಡಿ ಕಣ್ಣೀರಿಟ್ಟಿದ್ದರಂತೆ ಜಯಾ ಬಚ್ಚನ್…!

ಬಾಲಿವುಡ್‌ ಚಿತ್ರರಂಗದಲ್ಲಿ ಈ ಹಿಂದೆ ಬಹು ದೊಡ್ಡ ಚರ್ಚೆಗೆ ಕಾರಣವಾಗಿದ್ದ ವಿಷಯವೆಂದರೆ ಬಿಗ್‌ ಬಿ ಅಮಿತಾಬ್‌ ಹಾಗೂ ರೇಖಾ ನಡುವಿನ ಪ್ರೀತಿ. ಅದರಲ್ಲೂ ಒಮ್ಮೆ ಅಮಿತಾಬ್,‌ ನೀಡಿದ್ದ ಹೇಳಿಕೆ ಬಹಳಷ್ಟು ಊಹಾಪೋಹಕ್ಕೆ ಕಾರಣವಾಗಿತ್ತು. ಇದರ ಮಧ್ಯೆ ಅಂತೆಕಂತೆಗಳೂ ಸಹ ಹರಿದಾಡುತ್ತಿದ್ದವು.

ಜೊತೆಗೆ ಸಂದರ್ಶನವೊಂದರಲ್ಲಿ ರೇಖಾ ಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸಿದ್ದರು. ರೀಲ್ ನಲ್ಲಿ ರೇಖಾ – ಅಮಿತಾಬ್ ಪ್ರೀತಿ ನೋಡಿ ಜಯಾ ಬಚ್ಚನ್ ಕಣ್ಣಲ್ಲಿ ನೀರು ಬಂದಿತ್ತಂತೆ. 1978 ರ ಸಮಯ. ‘ಮುಖದ್ದರ್ ಕಾ ಸಿಖಂದರ್’ ಬಿಡುಗಡೆಯಾಗಿತ್ತು. ಅದೇ ರೇಖಾ- ಅಮಿತಾಬ್ ನಟಿಸಿದ ಕೊನೆಯ ಚಿತ್ರ.

ಚಿತ್ರ ವೀಕ್ಷಣೆಗೆ ಅಮಿತಾಬ್, ಕುಟುಂಬ ಸಮೇತರಾಗಿ ಬಂದಿದ್ದರಂತೆ. ಜಯಾ ಬಚ್ಚನ್ ಮುಂದಿನ ಸೀಟ್ ನಲ್ಲಿ ಕುಳಿತಿದ್ದರಂತೆ. ಹಿಂದಿನ ಸೀಟ್ ನಲ್ಲಿ ಅಮಿತಾಬ್ ಕುಳಿತಿದ್ದರಂತೆ. ಜಯಾ ಮುಖ ಅಮಿತಾಬ್ ಗೆ ಕಾಣ್ತಾ ಇರಲಿಲ್ಲ. ಆದ್ರೆ ನಾನು ಜಯಾರನ್ನು ಸರಿಯಾಗಿ ನೋಡಿದ್ದೆ. ನಮ್ಮಿಬ್ಬರ ಲವ್ ದೃಶ್ಯ ತೆರೆ ಮೇಲೆ ಬರ್ತಾ ಇದ್ದಂತೆ ಜಯಾ ಕಣ್ಣಲ್ಲಿ ನೀರು ಬಂದಿತ್ತು ಎಂದಿದ್ದರು ರೇಖಾ.

ಇಷ್ಟೇ ಅಲ್ಲ ಚಿತ್ರ ವೀಕ್ಷಿಸಿದ ಒಂದು ವಾರದೊಳಗೆ ಅಮಿತಾಬ್ ಇನ್ಮುಂದೆ ರೇಖಾ ಜೊತೆ ನಟಿಸಲ್ಲ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಈ ಬಗ್ಗೆ ಅಮಿತಾಬ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಾನೇ ಕೇಳಿದಾಗ, ಈ ಬಗ್ಗೆ ನನ್ನನ್ನು ಕೇಳಬೇಡ. ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದರಂತೆ ಅಮಿತಾಬ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...