alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಆರೋಗ್ಯದಲ್ಲಿ ಚೇತರಿಕೆ : ಜಯಾ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. ಬೆಳಿಗ್ಗೆ ಬಂದ ಈ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಅಮಿತಾಬ್ ಆರೋಗ್ಯದ ಬಗ್ಗೆ ಪತ್ನಿ ಜಯಾ ಬಚ್ಚನ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತಾಬ್ ಬಚ್ಚನ್ ಆರೋಗ್ಯವಾಗಿದ್ದಾರೆಂದು ಜಯಾ ಹೇಳಿದ್ದಾರೆ.

‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಶೂಟಿಂಗ್ ನಲ್ಲಿ ಅಮಿತಾಬ್ ಬ್ಯುಸಿಯಿದ್ದಾರೆ. ಜೋದ್ಪುರದಲ್ಲಿ ಶೂಟಿಂಗ್ ನಡೆಯುತ್ತಿದೆ. ಮಂಗಳವಾರ ಬೆಳಗಿನ ಜಾವ 3 ಗಂಟೆಯವರೆಗೂ ಬಿಗ್ ಬಿ ಶೂಟಿಂಗ್ ಮಾಡಿದ್ದಾರೆ. ಬೆಳಿಗ್ಗೆ 5 ಗಂಟೆ ವೇಳೆಗೆ ಟ್ವಿಟ್ ಮಾಡಿದ್ದ ಬಚ್ಚನ್, ಆರೋಗ್ಯ ಸರಿಯಿಲ್ಲ, ವೈದ್ಯರ ಸಲಹೆ ಪಡೆದು ವಿಶ್ರಾಂತಿ ಪಡೆಯುತ್ತೇನೆ ಎಂದಿದ್ದರು. ಆದ್ರೆ ಮತ್ತೆ ಶೂಟಿಂಗ್ ಶುರು ಮಾಡಿದ್ದರು.

ಶೂಟಿಂಗ್ ವೇಳೆ ಬಚ್ಚನ್ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಮುಂಬೈನಿಂದ ವೈದ್ಯರ ತಂಡವೊಂದು ಜೋದ್ಪುರ ತಲುಪಿದೆ. ಅಮಿತಾಬ್ ಬಚ್ಚನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಬಿಗ್ ಬಿ ಮುಂಬೈನಿಂದ ಚಾರ್ಟರ್ಡ್ ಪ್ಲೇನ್ ಕರೆಸಿಕೊಂಡಿದ್ದರು. ಆದ್ರೆ ಮುಂಬೈಗೆ ವಾಪಸ್ ಹೋಗಲು ಮನಸ್ಸು ಮಾಡಿಲ್ಲ. ಜೋದ್ಪುರದಲ್ಲಿಯೇ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ.

ಉತ್ತರಾಖಂಡ್ ನಲ್ಲಿರುವ ರಜನಿಕಾಂತ್, ಅಮಿತಾಬ್ ಬಚ್ಚನ್ ಆರೋಗ್ಯ ಸುಧಾರಣೆಗೆ ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...