alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಜಯಾ ಬಚ್ಚನ್ ರ ಡ್ಯಾನ್ಸ್ ವಿಡಿಯೋ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರ ಪತ್ನಿ ಜಯಾ ಬಚ್ಚನ್ ರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುಎಇ ಯಲ್ಲಿ ನಡೆದ ಮೋಹಿತ್ ಮಾರ್ವಾನ ವಿವಾಹ ಸಮಾರಂಭದಲ್ಲಿ ಜಯಾ ಬಚ್ಚನ್ ಈ ವಯಸ್ಸಿನಲ್ಲೂ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಕಪೂರ್ ಖಾಂದಾನ್ ನ ಮೋಹಿತ್ ಮಾರ್ವಾ ತನ್ನ ಬಹು ಕಾಲದ ಗೆಳತಿ ಅಂತರಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಇಡೀ ಕಪೂರ್ ಕುಟುಂಬ ಇದರಲ್ಲಿ ಭಾಗಿಯಾಗಿದೆ. ವಿಶೇಷವೆಂದರೆ ಸೋನಂ ಕಪೂರ್ ತನ್ನ ಬಾಯ್ ಫ್ರೆಂಡ್ ಅನಂದ್ ಅಹುಜಾ ಜೊತೆ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಇವರಿಬ್ಬರ ವಿವಾಹವೂ ಶೀಘ್ರದಲ್ಲೇ ನೆರವೇರಲಿದೆ ಎನ್ನಲಾಗಿದೆ.

ಬೋನಿ ಕಪೂರ್, ಅನಿಲ್ ಕಪೂರ್ ಹಾಗೂ ಸಂಜಯ್ ಕಪೂರ್ ರ ಸಹೋದರಿ ರೀನಾ ಕಪೂರ್ ರ ಹಿರಿಯ ಪುತ್ರನಾಗಿರುವ ಮೋಹಿತ್ ಮಾರ್ವಾ ಬಾಲಿವುಡ್ ನಟನೂ ಹೌದು. ತಂದೆ ಸಂದೀಪ್ ಮಾರ್ವಾರ ನೋಯ್ಡಾ ಫಿಲ್ಮ್ ಸಿಟಿಯ ಉಸ್ತುವಾರಿಯನ್ನೂ ಮೋಹಿತ್ ನೋಡಿಕೊಳ್ಳುತ್ತಾರೆ. ಇವರ ವಿವಾಹಕ್ಕೆ ಬಾಲಿವುಡ್ ನ ಗಣ್ಯಾತಿಗಣ್ಯರು ಹಾಜರಾಗಿದ್ದು, ಸಂಭ್ರಮದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...