alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ನನ್ನು ನೋಡಲು ಚೆನ್ನೈಗೆ ಬಂದ ಜಪಾನ್ ಜೋಡಿ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಇಂದು ಬಿಡುಗಡೆಯಾಗಿದೆ.

ಹಿಂದಿ, ತಮಿಳು, ತೆಲುಗು ಈ ಮೂರು ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಂಡಿದ್ದು, ತಮಿಳುನಾಡಿನ ಚೆನ್ನೈನಲ್ಲಿ ರಜನಿ ಅಭಿಮಾನಿಗಳು ‘ಕಾಲಾ’ ಕಟೌಟ್ ಮತ್ತು ಪೋಸ್ಟರ್ ಗಳಿಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಇದರ ಜೊತೆಗೆ ವಾದ್ಯ-ಮೇಳದೊಂದಿಗೆ ಸಂಭ್ರಮಿಸಿದ್ದಾರೆ. ‘ಕಾಲಾ’ ನ ಆಟ ಕೇವಲ ಭಾರತಕ್ಕೆ ಸೀಮಿತವಾಗಿದೆ ಎಂದು ನೀವು ತಿಳಿದುಕೊಂಡರೆ ಅದು ತಪ್ಪು…!

ರಜನಿಕಾಂತ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಜಪಾನಿ ಜೋಡಿಯೊಂದು ಟೋಕಿಯೋದ ಒಸಾಕಾ ನಗರದಿಂದ ಚೆನ್ನೈಗೆ ಬಂದಿಳಿದಿದ್ದಾರೆ. ಯಸುಧಾ ದಂಪತಿ ಚೆನ್ನೈಗೆ ಬಂದಿದ್ದು, ರಜನಿಯ ‘ಕಾಲಾ’ ಸಿನಿಮಾ ನೋಡಲು. ಅಷ್ಟೇ ಅಲ್ಲ, ಅವರು ತಮಿಳು ಭಾಷೆಯನ್ನು ಸಹ ಮಾತನಾಡುತ್ತಾರೆ.

ಇದೇ ವೇಳೆ ಮಾತನಾಡಿದ ಯಸುಧಾ, ನಾವು ಇಲ್ಲಿಗೆ ಸುಮಾರು 10 ವರ್ಷಗಳಿಂದ ಬರುತ್ತಿದ್ದೇವೆ. ನನಗೆ ಇಂಗ್ಲೀಷ್ ಮಾತನಾಡಲು ಅಷ್ಟಾಗಿ ಬರುವುದಿಲ್ಲ. ಆದರೆ ತಮಿಳು ಭಾಷೆ ಸ್ವಲ್ಪ ಸ್ವಲ್ಪ ಬರುತ್ತೆ. ನನಗೆ ರಜನಿಕಾಂತ್ ಅವರ ವಿಭಿನ್ನ ಸ್ಟೈಲ್ ಇಷ್ಟ, ಅವರ ಅಭಿನಯ, ಸರಳತೆ, ಎಲ್ಲವೂ ನನಗೆ ಬಹಳ ಇಷ್ಟ ಎಂದು ರಜನಿ ಕುರಿತು ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...