alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತ ನಟಿ ಕಿಸ್ಸಿಂಗ್ ದೃಶ್ಯಕ್ಕೆ ಗಲಾಟೆ ಮಾಡಿದ ತಾಯಿ

ಕಲರ್ಸ್ ಚಾನೆಲ್ ನಲ್ಲಿ ಬರ್ತಿರುವ ತು ಆಶಿಕಿ ಶೋ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಗಾಗಿದೆ. ಅಹಾನ್ ಹಾಗೂ ಪಂಗ್ತಿ ಲವ್ ಸ್ಟೋರಿ ಎಲ್ಲರಿಗೂ ಇಷ್ಟವಾಗ್ತಿದೆ. ಮಾಧ್ಯಮಗಳ ವರದಿ ಪ್ರಕಾರ ಪಂಗ್ತಿ ತಾಯಿ ಶೋ ನಿರ್ದೇಶಕರ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಸೆಟ್ ನಲ್ಲಿ ಪ್ರೀತಿ ದೃಶ್ಯವೊಂದನ್ನು ವಿರೋಧಿಸಿ ಪಂಗ್ತಿ ತಾಯಿ ಗಲಾಟೆ ಮಾಡಿದ್ದಾರಂತೆ.

ಪಂಗ್ತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜನ್ನತ್ ಜುಬೇರ್ ತಾಯಿ ಕಿಸ್ಸಿಂಗ್ ದೃಶ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನ್ನತ್ ಹಾಗೂ ಅಹಾನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿತ್ವಿಕ್ ಮಧ್ಯೆ ಕಿಸ್ಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಇದು ಜನ್ನತ್ ತಾಯಿಗೆ ಒಪ್ಪಿಗೆಯಿರಲಿಲ್ಲ.

ಒಪ್ಪಂದದ ಪತ್ರಕ್ಕೆ ಸಹಿ ಹಾಕುವಾಗ ಕೂಡ ಜನ್ನತ್ ತಾಯಿ ಷರತ್ತು ವಿಧಿಸಿದ್ದರು. ಆದ್ರೂ ನಿರ್ದೇಶಕರು ರೋಮ್ಯಾನ್ಸ್ ದೃಶ್ಯ ಶೂಟ್ ಮಾಡ್ತಿರುವುದು ಜನ್ನತ್ ತಾಯಿ ಕೋಪಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಜನ್ನತ್ ಇನ್ನೂ ಅಪ್ರಾಪ್ತೆ. ಇದು ಕೂಡ ಜನ್ನತ್ ತಾಯಿ ಕೋಪಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...