alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಸದ್ದು ಮಾಡ್ತಿದೆ ಶ್ರೀದೇವಿ ಪುತ್ರಿಯ ಫೋಟೋ

ತಾಯಿಯಂತೆ ಮಗಳು, ನೂಲಿನಂತೆ ಸೀರೆ ಅನ್ನೋದು ಗಾದೆ ಮಾತು. ವೇದ ಸುಳ್ಳಾದರು ಗಾದೆ ಸುಳ್ಳಾಗಲ್ಲ ನೋಡಿ. ಈ ಮಾತೀಗ ಸದ್ಯ ಬಾಲಿವುಡ್ ನ ಹಾಟ್ ಟಾಪಿಕ್ ಆಗಿಬಿಟ್ಟಿದೆ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಥೇಟ್ ನೀನು ನಿಮ್ಮ ಅಮ್ಮನ ಹಾಗೆ ಅನ್ನೋ ಹೊಗಳಿಕೆಯನ್ನ ಈಗ ನೆಟ್ಟಿಗರಿಂದ ಪಡೆದಿದ್ದಾರೆ. ಅದು ಕೇವಲ ಒಂದು ಫೊಟೋ ಮೂಲಕ.

ಜುಲೈ 20 ರಂದು ದಢಕ್ ಚಿತ್ರ ತೆರೆಗೆ ಬರ್ತಿದೆ. ಸದ್ಯ ದಢಕ್ ಸಿನಿಮಾ ಪ್ರಮೋಶನ್ಸ್ ಮಾಡ್ತಿರೋ ಚಿತ್ರ ತಂಡ ಲಕ್ನೋಗೆ ತೆರಳಿದೆ. ಪ್ರಮೋಶನ್ ಗೂ ಮುನ್ನ ಶ್ರಿದೇವಿ ಪುತ್ರಿ ತಮ್ಮದೇ ಒಂದಷ್ಟು ಫೋಟೋಗಳನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಪೋಸ್ಟ್ ಆದ ಒಂದು ಗಂಟೆಯಲ್ಲೇ ಎರಡು ಲಕ್ಷ ಲೈಕ್ಸ್ ಗಳನ್ನ ಪಡೆದಿದೆ. ಅನೇಕರು ಜಾಹ್ನವಿ ಫೋಟೋವನ್ನ ನೋಡಿ ಕಾಮೆಂಟ್ ಮಾಡಿದ್ದಾರೆ. ನಿನ್ನಲ್ಲಿ ನಿನ್ನ ತಾಯಿ ನೆಲೆಸಿದ್ದಾರೆ, ನೀನು ನಿನ್ನಮ್ಮನ ಕಾರ್ಬನ್ ಕಾಪಿಯಂತೆ, ನಿನ್ನ ಕಣ್ಣುಗಳು ಶ್ರಿದೇವಿಯರ ಕಣ್ಣುಗಳನ್ನೇ ಹೋಲುತ್ತಿವೆ ಅಂತ ಜಾಹ್ನವಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಕಾಮೆಂಟ್ ಗಳನ್ನ ಓದಿದ ಮೇಲೆ ಜಾಹ್ನವಿ ತಾಯಿಯ ಬಗ್ಗೆ ಮತ್ತಷ್ಟು ಹೆಮ್ಮೆ ಪಟ್ಟಿದ್ದಾರೆ.

ಶ್ರೀದೇವಿಯಯವರಿಗೆ ಸಿಕ್ಕ ಮರಣೋತ್ತರ ರಾಷ್ಟ್ರ ಪ್ರಶಸ್ತಿಯನ್ನ ಜಾಹ್ನವಿ ಸ್ವೀಕರಿಸಿದ್ದರು. ಅಲ್ಲದೇ ದಢಕ್ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲೂ ಜಾಹ್ನವಿ ತಾಯಿಯನ್ನ ನೆನೆದು ಕಣ್ಣೀರು ಹಾಕಿದ್ದರು. ದಢಕ್ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲೂ ಆಗಾಗ್ಗೆ ಶೂಟಿಂಗ್ ಸೆಟ್ಗೆ ಭೇಟಿ ನೀಡುತ್ತಿದ್ದರು. ಆದ್ರೆ ಶ್ರಿದೇವಿಯರ ಆಕಸ್ಮಿಕ ಸಾವು ಜಾಹ್ನವಿಯನ್ನ ಈಗಲೂ ಕಾಡ್ತಿದೆ. ಸದ್ಯ ನೆಟ್ಟಿಗರ ಮಾತು ಜಾಹ್ನವಿಗೆ ಆ ಕೊರತೆಯನ್ನ ಕೊಂಚ ಮಟ್ಟಿಗೆ ನೀಗಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...