alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರ ಅರ್ಜುನ್ ಕಪೂರ್ ಜೊತೆ ಜಾಹ್ನವಿಯ ಮೊದಲ ಪ್ರಾಜೆಕ್ಟ್

ಕಾಫಿ ವಿಥ್ ಕರಣ್ ಸರಣಿ ಮತ್ತೆ ಶುರುವಾಗ್ತಿದೆ. ಕರಣ್ ಜೋಹರ್ ಈ ಶೋಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅನೇಕ ವಿಶೇಷ ಕಲಾವಿದರು ಕಾರ್ಯಕ್ರಮಕ್ಕೆ ಬರಲಿದ್ದಾರಂತೆ. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.

ವರದಿ ಪ್ರಕಾರ, ಕರಣ್ ಜೋಹರ್ ಶೋನಲ್ಲಿ ಬೋನಿ ಕಪೂರ್ ಮಕ್ಕಳು ಕಾಣಿಸಿಕೊಳ್ಳಲಿದ್ದಾರಂತೆ. ಜಾಹ್ನವಿ ಕಪೂರ್ ಹಾಗೂ ಅರ್ಜುನ್ ಕಪೂರ್ ರನ್ನು ಒಟ್ಟಿಗೆ ಶೋಕ್ಕೆ ಕರೆತರುವ ತಯಾರಿ ನಡೆದಿದೆ. ಬೋನಿ ಕಪೂರ್ ಇಬ್ಬರಿಗೂ ಅಪ್ಪನಾದ್ರೆ ತಾಯಂದಿರು ಮಾತ್ರ ಬೇರೆ ಬೇರೆ. ಮೋನಾ ಮಗ ಅರ್ಜುನ್ ಆದ್ರೆ ಶ್ರೀದೇವಿ ಮಗಳು ಜಾಹ್ನವಿ.

ಶ್ರೀದೇವಿ ಬದುಕಿರುವವರೆಗೂ ಅರ್ಜುನ್ ಕಪೂರ್, ಜಾಹ್ನವಿ ಹಾಗೂ ಖುಷಿಯಿಂದ ದೂರವಿದ್ದ. ತನ್ನ ಸಹೋದರಿಯರು ಅವರಲ್ಲವೆಂದು ಸಂದರ್ಶನದಲ್ಲೂ ಹೇಳಿದ್ದ. ಆದ್ರೆ ಶ್ರೀದೇವಿ ಸಾವಿನಲ್ಲಿ ಸಹೋದರ-ಸಹೋದರಿಯರು ಒಂದಾಗಿದ್ದಾರೆ. ನಂತ್ರ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರನ್ನು ಒಂದೇ ವೇದಿಕೆ ಮೇಲೆ ತಂದು ಸಾಕಷ್ಟು ಖಾಸಗಿ ವಿಚಾರಗಳನ್ನು ಕೆದಕುವ ಪ್ರಯತ್ನ ನಡೆಸಲಿದ್ದಾರೆ ಕರಣ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...