alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಕೊನೆ ಭೇಟಿ ಬಗ್ಗೆ ಮಗಳು ಜಾಹ್ನವಿ ಹೇಳಿದ್ದೇನು?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಮಗಳು ಜಾಹ್ನವಿ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗ್ತಿದ್ದಾಳೆ. ಚಿತ್ರಕ್ಕೂ ಮುನ್ನ ಪತ್ರಿಕೆಯೊಂದಕ್ಕೆ ಫೋಟೋ ಶೂಟ್ ಮಾಡಿದ ಜಾಹ್ನವಿ ಗ್ಲಾಮರ್ ಲುಕ್ ನಲ್ಲಿ ಮಿಂಚಿದ್ದಾಳೆ. Vogue ಪತ್ರಿಕೆಗೆ ಸಂದರ್ಶನ ನೀಡಿದ ಜಾಹ್ನವಿ ಅಮ್ಮ ಶ್ರೀದೇವಿ ಬಗ್ಗೆ ಇದೇ ಮೊದಲ ಬಾರಿ ಮನಸ್ಸು ಬಿಚ್ಚಿ ಮಾತನಾಡಿದ್ದಾಳೆ.

ಅಮ್ಮ ಹೋದ ಮೇಲೆ ಆ ಜಾಗವನ್ನು ಜೀವನದಲ್ಲಿ ಎಂದೂ, ಯಾರೂ ತುಂಬಲು ಸಾಧ್ಯವಿಲ್ಲವೆಂದು ಜಾಹ್ನವಿ ಹೇಳಿದ್ದಾಳೆ. ಅಮ್ಮನಿಗೆ ನಾನು ಸಿನಿಮಾ ರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ನಾನು ತುಂಬಾ ಭಾವುಕಳು. ಹಾಗಾಗಿ ನನ್ನ ಬಗ್ಗೆ ಹೆಚ್ಚು ಕಾಳಜಿಯಿತ್ತು ಎಂದು ಜಾಹ್ನವಿ ಹೇಳಿದ್ದಾಳೆ.

ಲಂಡನ್ ಗೆ ಹೋಗುವ ದಿನ ನಾನು ತುಂಬಾ ಬ್ಯುಸಿಯಿದ್ದೆ. ರಾತ್ರಿ ಮನೆಗೆ ಬಂದ ನಂತ್ರ ಮಲಗಿಸುವಂತೆ ಅಮ್ಮನಿಗೆ ಹೇಳಿದ್ದೇನೆ. ಅವ್ರು ಪ್ಯಾಕಿಂಗ್ ನಲ್ಲಿ ಬ್ಯುಸಿಯಿದ್ದರು. ಹಾಗಾಗಿ ನಾನು ರೂಮಿಗೆ ಹೋಗಿ ಮಲಗಿದ್ದೆ. ಆದ್ರೆ ರಾತ್ರಿ ಅಮ್ಮ ಬಂದು ತಲೆ ಸವರಿದ್ದರು. ನಿದ್ರೆಯಲ್ಲೂ ನನಗೆ ಅದು ಗೊತ್ತಾಗಿತ್ತು ಎಂದು ಜಾಹ್ನವಿ ಹೇಳಿದ್ದಾಳೆ.

ಕೆಲವೊಮ್ಮೆ ನನಗೆ ಊಟ ಮಾಡಿಸ್ತಿದ್ದ ಅಮ್ಮ ಪ್ರತಿ ದಿನ ನನ್ನನ್ನು ಮಲಗಿಸುತ್ತಿದ್ದರು. ಈಗ ನನ್ನ ಸಹೋದರಿ ನನ್ನನ್ನು ಮಲಗಿಸುತ್ತಾಳೆ. ಆಕೆ ಅಮ್ಮನ ಜವಾಬ್ದಾರಿ ಹೊತ್ತಿದ್ದಾಳೆ. ನಾನು ಅಮ್ಮ, ತಂಗಿ ಒಟ್ಟಿಗೆ ಶಾಪಿಂಗ್ ಗೆ ಹೋಗ್ತಿದ್ದೆವು. ಆಗ ತಂದೆ ಮೂರು ಮಹಿಳೆಯರು ಒಂದೇ ಕೆಲಸಕ್ಕಿಳಿದಿದ್ದಾರೆಂದು ತಮಾಷೆ ಮಾಡ್ತಿದ್ದರು ಎಂದು ಜಾಹ್ನವಿ ಹಿಂದಿನ ದಿನಗಳನ್ನು ನೆನೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...