alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಲಕ್ಷದ ಬೂಟ್ ಧರಿಸಿ ಬಂದ್ರೂ ಟ್ರೋಲ್ ಆದ ನಟಿ

ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಇತ್ತೀಚಿನ ದಿನಗಳಲ್ಲಿ ಏನು ಮಾಡಿದ್ರೂ ಸುದ್ದಿಯಾಗ್ತಾಳೆ. ಜಾಹ್ನವಿ ಕಪೂರ್ ಸ್ಟೈಲ್ ಅಭಿಮಾನಿಗಳನ್ನು ಸೆಳೆಯುತ್ತದೆ. ಜಾಹ್ನವಿ ಎರಡು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ತನ್ನ ಸಹೋದರಿ ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಈ ಫೋಟೋ ಟ್ರೋಲರ್ ಗಳ ಬಾಯಿಗೆ ಆಹಾರವಾಗಿದೆ. ವಿಶೇಷವೆಂದ್ರೆ ಜಾಹ್ನವಿ ಯಾವ ವಿಚಾರಕ್ಕೆ ಟ್ರೋಲ್ ಆಗಿದ್ದಾಳೋ ಅದ್ರ ಬೆಲೆ 1.2 ಲಕ್ಷ ರೂಪಾಯಿ.

ಎರಡು ದಿನಗಳ ಹಿಂದೆ ಜಾಹ್ನವಿ, ಅನಿಲ್ ಅಂಬಾನಿ ಮಗಳು ಇಶಾ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾಳೆ. ಈ ವೇಳೆ ಜಾಹ್ನವಿ ಡೆನಿಮ್ ಮತ್ತು ಪರ್ಪಲ್ ಟಾಪ್ ಧರಿಸಿದ್ದಳು. ಜೊತೆಗೆ ಬಣ್ಣದ ಬೂಟ್ ಧರಿಸಿದ್ದಳು. ಗುಸ್ಸಿ ಬ್ರ್ಯಾಂಡ್ ನ ಈ ಬೂಟ್ ಬೆಲೆ 1.2 ಲಕ್ಷ ರೂಪಾಯಿ.

ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಜಾಹ್ನವಿ ಶೂ ಇಷ್ಟವಾಗಲಿಲ್ಲ. ಕೊಳಕು ಹಾಗೂ ಕೆಟ್ಟ ಫ್ಯಾಷನ್ ಎಂದು ಅನೇಕರು ಜಾಹ್ನವಿಗೆ ಕಮೆಂಟ್ ಮಾಡಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ಜಾಹ್ನವಿ ಧರಿಸಿರುವ ಬೂಟ್ ಟ್ರೋಲರ್ ಬಾಯಿಗೆ ಆಹಾರವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...