alex Certify
ಕನ್ನಡ ದುನಿಯಾ       Mobile App
       

Kannada Duniya

‘ಧಡಕ್’ ನಂತ್ರ ಹೋಂ ಪ್ರೊಡಕ್ಷನ್ ನಲ್ಲಿ ಜಾಹ್ನವಿ ಕಪೂರ್

ಧಡಕ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಮೂರು ದಿನಗಳಲ್ಲಿ ಚಿತ್ರ 33 ಕೋಟಿ ಗಳಿಕೆ ಕಂಡಿದೆ. ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿರುವ ಜಾಹ್ನವಿ ಕಪೂರ್ ಮುಂದಿನ ಚಿತ್ರದ ಬಗ್ಗೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ವರದಿ ಪ್ರಕಾರ ಜಾಹ್ನವಿ ಕಪೂರ್ ಮುಂದಿನ ಚಿತ್ರವನ್ನು ಹೋಂ ಪ್ರೊಡಕ್ಷನ್ ನಲ್ಲಿ ಮಾಡಲಿದ್ದಾಳಂತೆ. ಬೋನಿ ಕಪೂರ್ ಈ ಬಗ್ಗೆ ತಮ್ಮ ಪ್ಲಾನ್ ಏನೆಂಬುದನ್ನು ಹೇಳಿಲ್ಲ. ಆದ್ರೆ ಜಾಹ್ನವಿಗಾಗಿ ಅತ್ಯುತ್ತಮ ಸ್ಕ್ರಿಪ್ಟ್ ಹುಡುಕುತ್ತಿರುವುದಾಗಿ ಅವ್ರು ಹೇಳಿದ್ದಾರೆ. ಜಾಹ್ನವಿ ಮುಂದಿನ ಚಿತ್ರ ಧಡಕ್ ಇಮೇಜ್ ಗಿಂತ ಭಿನ್ನವಾಗಿರಲಿ ಎಂಬುದು ಅವ್ರ ಆಶಯ.

ಬೋನಿ ಕಪೂರ್ ಪ್ರೊಡಕ್ಷನ್ ಚಿತ್ರದಲ್ಲಿ ಪತ್ನಿ ಶ್ರೀದೇವಿ ಹಾಗೂ ಮಗ ಅರ್ಜುನ್ ಕಪೂರ್ ಹಾಗೂ ಸಹೋದರ ಅನಿಲ್ ಕಪೂರ್  ಕಾಣಿಸಿಕೊಂಡಿದ್ದಾರೆ. ಜಾಹ್ನವಿ ಕೂಡ ನಟಿಸಲಿದ್ದು, ಮಗಳಿಗಾಗಿ ಬೋನಿ ಸಾಕಷ್ಟು ಹಣ ಸುರಿಯಲಿದ್ದಾರೆ ಎನ್ನುತ್ತಿದೆ ಬಾಲಿವುಡ್. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಾಹ್ನವಿ ಎಲ್ಲ ನಿರ್ದೇಶಕರ ಜೊತೆ ಕೆಲಸ ಮಾಡಲು ಸಿದ್ಧ ಎಂದಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...