alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗುಗೊಳಿಸುವ, ಬ್ಯೂಟಿಫುಲ್ ಡ್ರೆಸ್ ನಲ್ಲಿ ಬಾಲಿವುಡ್ ನಟಿ

ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಕೆಲ ದಿನಗಳ ಹಿಂದಷ್ಟೇ ಭರ್ಜರಿ ಪಾರ್ಟಿ ಏರ್ಪಡಿಸಿದ್ದರು. ಪಾರ್ಟಿಗೆ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ, ಅನನ್ಯ ಪಾಂಡೆ, ಸಾರಾ ಅಲಿ ಖಾನ್, ಕಾಜೋಲ್, ರವೀನಾ ಟಂಡನ್, ಕರಿಶ್ಮಾ ಕಪೂರ್, ಸೋಫಿ ಚೌಧರಿ, ಸೋನಾಕ್ಷಿ ಸಿನ್ಹಾ, ಏಕ್ತಾ ಕಪೂರ್ ಸೇರಿದಂತೆ ಅನೇಕ ಕಲಾವಿದರು ಬಂದಿದ್ದರು. ಅವ್ರಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ.

ಜಾಹ್ನವಿ ಕಪೂರ್ ಕೆಂಪು ಬಣ್ಣದ ಜಂಪ್ಸೂಟ್ ಧರಿಸಿದ್ದಳು. ಸಹೋದರಿ ಖುಷಿ ಕಪೂರ್ ಜೊತೆ ಬಂದಿದ್ದ ಜಾಹ್ನವಿ, ತಾಯಿ ಶ್ರೀದೇವಿಯವರನ್ನು ನೆನಪು ಮಾಡಿದ್ರು. ಇದೇ ವರ್ಷ ಜನವರಿಯಲ್ಲಿ ಟೀನಾ ಅಂಬಾನಿ ಪಾರ್ಟಿಗೆ ಕೆಂಪು ಬಣ್ಣದ ಜಂಪ್ಸೂಟ್ ಧರಿಸಿ ಬಂದಿದ್ದರು. ಈಗ ಜಾಹ್ನವಿ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದು, ಜಾಹ್ನವಿ ಎಲ್ಲರ ಗಮನ ಸೆಳೆದ್ಲು.

ಫ್ಯಾಷನ್ ವಿಚಾರದಲ್ಲಿ ತಾಯಿ ಶ್ರೀದೇವಿ ಹೆಜ್ಜೆಯನ್ನು ಜಾಹ್ನವಿ ಪಾಲಿಸ್ತಿದ್ದಾಳೆ. ಈ ಹಿಂದೆ ಕೂಡ ಜಾಹ್ನವಿ ಅಮ್ಮನ ಫ್ಯಾಷನ್ ಪಾಲಿಸಿದ ಕೆಲ ಫೋಟೋಗಳು ವೈರಲ್ ಆಗಿವೆ. ಶ್ರೀದೇವಿ ಬದುಕಿದ್ದಾಗ ಕೂಡ ಅಮ್ಮ, ಮಗಳು ಒಂದೇ ರೀತಿಯ ಬಟ್ಟೆ ತೊಟ್ಟು ಅಭಿಮಾನಿಗಳ ಕಣ್ಣು ತಂಪು ಮಾಡ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...