alex Certify
ಕನ್ನಡ ದುನಿಯಾ       Mobile App
       

Kannada Duniya

21 ವರ್ಷಗಳ ಬಳಿಕ ಅಣ್ಣನಿಗೆ ರಾಖಿ ಕಟ್ಟುತ್ತಿದ್ದಾಳೆ ಈ ನಟಿ

ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ರಕ್ಷಾ ಬಂಧನವನ್ನು ಎದುರು ನೋಡ್ತಿದ್ದಾಳೆ. 21 ವರ್ಷಗಳ ನಂತ್ರ ಇದೇ ಮೊದಲ ಬಾರಿ ಅಣ್ಣನಿಗೆ ಜಾಹ್ನವಿ ಕಪೂರ್ ರಾಖಿ ಕಟ್ಟಲಿದ್ದಾಳೆ. ಧಡಕ್ ಚಿತ್ರದ ಮೂಲಕ ಸದ್ದು ಮಾಡ್ತಿರುವ ಜಾಹ್ನವಿ, ಸಹೋದರ ಹಾಗೂ ನಟ ಅರ್ಜುನ್ ಕಪೂರ್ ಗೆ ಹತ್ತಿರವಾಗಿದ್ದಾಳೆ.

ಅನೇಕ ವರ್ಷಗಳಿಂದ ಜಾಹ್ನವಿ ಹಾಗೂ ಅರ್ಜುನ್ ಕಪೂರ್ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿತ್ತು. ಫೆಬ್ರವರಿ 24ರಂದು ಶ್ರೀದೇವಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೋನಿ ಕಪೂರ್ ಮನೆಗೆ ಬಂದು ಜಾಹ್ನವಿಗೆ ಸಾಂತ್ವನ ಹೇಳಿದ್ರು ಅರ್ಜುನ್ ಕಪೂರ್. ಅಲ್ಲಿಂದ ಜಾಹ್ನವಿ ಹಾಗೂ ಖುಷಿ ಕಪೂರ್ ಜೊತೆ ಅರ್ಜುನ್ ಸಾಕಷ್ಟು ಕಾಲ ಕಳೆದಿದ್ದಾರೆ.

ಸೋನಂ ಕಪೂರ್ ಮದುವೆಯಲ್ಲಿ ಕೂಡ ಸಹೋದರ, ಸಹೋದರಿಯರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಜಾಹ್ನವಿ ಹಾಗೂ ಖುಷಿ ಅನೇಕ ಬಾರಿ ಅರ್ಜುನ್ ಕಪೂರ್ ಮನೆಗೆ ಹೋಗಿ ಬಂದಿದ್ದಾರೆ. ಅಣ್ಣನಿಗೆ ರಾಖಿ ಕಟ್ಟಬೇಕೆಂಬ ಆಸೆ ಈಗ ಈಡೇರುತ್ತಿದೆ. ಈ ವರ್ಷ ಅರ್ಜುನ್ ಕಪೂರ್ ಗೆ ಜಾಹ್ನವಿ ರಾಖಿ ಕಟ್ಟಲಿದ್ದಾಳೆ. ಮೋನಾರನ್ನು ಬಿಟ್ಟು ಬೋನಿ ಕಪೂರ್, ಶ್ರೀದೇವಿ ಮದುವೆಯಾಗಿದ್ದರು. ಇದು ಅರ್ಜುನ್ ಮನಸ್ಸನ್ನು ಘಾಸಿಗೊಳಿಸಿತ್ತು. ಖುಷಿ ಹಾಗೂ ಜಾಹ್ನವಿಯನ್ನು ಎಂದೂ ಸಹೋದರಿಯರು ಎಂದುಕೊಂಡಿಲ್ಲವೆಂದು ಅರ್ಜುನ್ ಒಮ್ಮೆ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...