alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ರಮ್ಯಾ ಕುರಿತಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಜಗ್ಗೇಶ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಎ.ಐ.ಸಿ.ಸಿ. ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೆ ಬಿ.ಜೆ.ಪಿ. ಮುಖಂಡ, ನಟ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.

ಮೋದಿ ನಿನ್ನೆ ಬಿ.ಜೆ.ಪಿ. ಪರಿವರ್ತನಾ ಸಮಾವೇಶದಲ್ಲಿ ಮಾತನಾಡುತ್ತಾ, ಫಾರ್ಮರ್ಸ್ ಆರ್ ಮೈ ‘ಟಾಪ್’ ಪ್ರಯಾರಿಟಿ ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ರೈತರು ಟೊಮೆಟೊ ಚೆಲ್ಲುತ್ತಿರುವ ಫೋಟೋ ಹಾಕಿದ ರಮ್ಯಾ ನಶೆಯಲ್ಲಿ ಇದ್ದಾಗ ಹೀಗೆ ಆಗುತ್ತೆ ಎಂದು ಟೀಕಿಸಿದ್ದಾರೆ.

ರಮ್ಯಾ ಅವರ ಟೀಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಲ್ಪಾ ಗಣೇಶ್ ಅವರು, ಸೋಲಿನಿಂದ ಕಂಗೆಟ್ಟು ವಿದೇಶಕ್ಕೆ ಹೋಗಿದ್ದ ರಮ್ಯಾ ಹೆಸರಲ್ಲೇ ರಮ್ ಇದೆ. ಅವರು ಕುಡಿದು ಟ್ವೀಟ್ ಮಾಡಿರಬಹುದೆಂದು ವ್ಯಂಗ್ಯವಾಡಿದ್ದಾರೆ.

ನಟ ನವರಸನಾಯಕ ಜಗ್ಗೇಶ್ ಕೂಡ ರಮ್ಯಾ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ದೊಡ್ಡವರ ಬಗ್ಗೆ ಮಾತನಾಡುವಾಗ ಅನುಭವ, ವಯಸ್ಸು, ಸಾಧನೆ ತಿಳಿದಿರಲಿ. ವಿಶ್ವದ ಬಲಿಷ್ಠ ನಾಯಕರೇ ಮೋದಿ ಅವರನ್ನು ಒಪ್ಪಿಕೊಂಡಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪದಂತೆ ಈಕೆ ಎಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...