alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲ ಮೂಡಿಸಿದೆ ನವರಸ ನಾಯಕನ ಹೊಸ ಚಿತ್ರ

‘8 ಎಂ.ಎಂ.’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಮತ್ತೊಂದು ವಿಶೇಷವಾದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ‘ಪ್ರೀಮಿಯರ್ ಪದ್ಮಿನಿ’ ಹೆಸರಿನ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದು, ಸುಧಾರಾಣಿ ಹಾಗೂ ಮಧುಬಾಲ ಅವರು ಕೂಡ ಚಿತ್ರದಲ್ಲಿರುವುದು ವಿಶೇಷವಾಗಿದೆ.

ರಮೇಶ್ ಇಂದ್ರ ನಿರ್ದೇಶನ, ಶ್ರುತಿ ನಾಯ್ಡು ನಿರ್ಮಾಣದಲ್ಲಿ ಚಿತ್ರ ಮೂಡಿ ಬರಲಿದೆ. ಪ್ರಮೋದ್, ಸಿಹಿಕಹಿ ಚಂದ್ರು, ಹಿತಾ ಚಂದ್ರಶೇಖರ್ ಮೊದಲಾದವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಏಪ್ರಿಲ್ 18 ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಶೂಟಿಂಗ್ ಗೆ ಪ್ಲಾನ್ ಮಾಡಲಾಗಿದೆ. ಗಮನಸೆಳೆದಿರುವ ‘8.ಎಂ.ಎಂ.’ ಚಿತ್ರದ ಬಳಿಕ ಜಗ್ಗೇಶ್ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳು, ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...