alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಕ್ವೇಲಿನ್ ವಿಡಿಯೋ ನೋಡಿ ಮೂಗಿನ ಮೇಲೆ ಬೆರಳಿಟ್ರು ಅಭಿಮಾನಿಗಳು

ನಟಿ ಜಾಕ್ವೇಲಿನ್ ಫರ್ನಾಂಡಿಸ್ ಡಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾನ್ಸ್ ನಲ್ಲೊಂದೇ ಅಲ್ಲ ವ್ಯಾಯಾಮದಲ್ಲೂ ಜಾಕ್ವೇಲಿನ್ ಹಿಂದೆ ಬಿದ್ದಿಲ್ಲ. ಇದಕ್ಕೆ ಜಾಕ್ವೇಲಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಸಾಕ್ಷಿ. ಇನ್ಸ್ಟ್ರಾಗ್ರಾಮ್ ನಲ್ಲಿ ಜಾಕ್ವೇಲಿನ್ ಹಂಚಿಕೊಂಡಿರುವ ವಿಡಿಯೋ ನೋಡಿ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಈ ವಿಡಿಯೋ ಜೊತೆ ಜಾಕ್ವೇಲಿನ್ ತನ್ನ ಕಮೆಂಟ್ ಕೂಡ ಹಾಕಿದ್ದಾಳೆ. ಇಷ್ಟು ಚೆನ್ನಾಗಿ ಲೆಗ್ ಸ್ಪ್ಲಿಟ್ ಮಾಡ್ತೇನೆಂಬುದು ನನಗೆ ತಿಳಿದಿರಲಿಲ್ಲ. ಗುರು, ಶಿಕ್ಷಕ, ಮಾರ್ಗದರ್ಶಕರಿಂದ ನಮ್ಮ ಪ್ರತಿಭೆ ಹೊರ ಬರಲು ಸಾಧ್ಯ. ನಮ್ಮ ಮಿತಿಗಿಂತ ಮುಂದೆ ಹೋಗಲು ಗುರುಗಳು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಅವ್ರಿಗೆ ನಮ್ಮ ಸಾಮರ್ಥ್ಯ ತಿಳಿದಿರುತ್ತದೆ ಎಂದು ಜಾಕ್ವೇಲಿನ್ ಬರೆದಿದ್ದಾಳೆ.

ಜಾಕ್ವೇಲಿನ್ ವಿಡಿಯೋ ನೋಡಿದ ಅಭಿಮಾನಿಗಳು ಅಮೇಜಿಂಗ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ನಮ್ಮ ಪ್ರೇರಣೆ ಎಂದಿದ್ದಾರೆ. ಜಾಕ್ವೇಲಿನ್ ಸಿನಿಮಾ ಜೊತೆ ವರ್ಕ್ ಔಟ್ ನಿಂದಲೂ ಸುದ್ದಿ ಮಾಡ್ತಿದ್ದಾಳೆ. ಕೆಲ ದಿನಗಳ ಹಿಂದಷ್ಟೆ ಪೋಲ್ ಡಾನ್ಸ್ ಮೂಲಕ ಸದ್ದು ಮಾಡಿದ್ದಳು.

ಸದ್ಯ ಸಲ್ಮಾನ್ ಖಾನ್ ಜೊತೆ ರೇಸ್-3ನಲ್ಲಿ ಜಾಕ್ವೇಲಿನ್ ನಟಿಸಿದ್ದಾಳೆ. ಚಿತ್ರ ಇದೇ ಜೂನ್ 15ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...