alex Certify
ಕನ್ನಡ ದುನಿಯಾ       Mobile App
       

Kannada Duniya

ಇಶಾ ಅಂಬಾನಿ ಜೊತೆ ಗೂಮರ್ ನೃತ್ಯ ಮಾಡಿದ ಶ್ಲೋಕಾ ಮೆಹ್ತಾ

ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಎಂಗೇಜ್ಮೆಂಟ್ ಪಾರ್ಟಿ ಜೂನ್ 30 ರಂದು ಅದ್ಧೂರಿಯಾಗಿ ನಡೆದಿದೆ. ನಾಲ್ಕು ದಿನಗಳ ಈ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಿದ್ದರು. ಭಾವಿ ಅತ್ತಿಗೆ ಶ್ಲೋಕಾ ಮೆಹ್ತಾ ಜೊತೆ ಇಶಾ ಅಂಬಾನಿ ಡಾನ್ಸ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.

ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಆಕಾಶ್ ಅಂಬಾನಿ ತಾಯಿ ನೀತಾ ಅಂಬಾನಿ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿದ್ದರು. ಇದ್ರ ವಿಡಿಯೋ ವೈರಲ್ ಆಗಿತ್ತು. ಎಂಗೇಜ್ಮೆಂಟ್ ನ ಕೆಲ ವಿಡಿಯೋ ಹಾಗೂ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈಗ ಇಶಾ ಅಂಬಾನಿ ಫ್ಯಾನ್ ಪೇಜ್ ನಲ್ಲಿ ವೈರಲ್ ಆಗಿದೆ.

ಇಶಾ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ಪದ್ಮಾವತ್ ಚಿತ್ರದ ಗೂಮರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಶಾರುಕ್ ಖಾನ್ ವಿಶೇಷ ಪ್ರದರ್ಶನ ನೀಡಿದ್ರು. ಶಾರುಕ್ ಜೊತೆ ಅಂಬಾನಿ ಕುಟುಂಬ ಹಾಗೂ ರಣಬೀರ್ ಕಪೂರ್, ಅರ್ಜುನ್ ಕಪೂರ್, ಅಭಿಷೇಕ್ ಬಚ್ಚನ್ ಗ್ರೂಪ್ ಡಾನ್ಸ್ ಮಾಡಿದ್ರು. ಆಕಾಶ್-ಶ್ಲೋಕಾ ಮದುವೆ ದಿನಾಂಕ ಇನ್ನೂ ಹೊರ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...