alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪುತ್ರಿಯ ಎಂಗೇಜ್ಮೆಂಟ್ ಗಾಗಿ ಇಟಲಿಗೆ ತೆರಳಿದ ಬಾಲಿವುಡ್ ತಾರೆಯರು

ಮೇ ನಲ್ಲಿ ನಡೆದಂತಾ ಫಾರ್ಮಲ್ ಮಾತುಕತೆಯ ಬಳಿಕ ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಕೇಶ್ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿಯ ವಿವಾಹ ನಿಶ್ಚಯ ಕಾರ್ಯ ಇಟಲಿಯಲ್ಲಿ ನಡೆದಿದೆ.

ಇಟಲಿಯ ಅತ್ಯಂತ ದುಬಾರಿಯಾದ ಲೇಕ್ ಕಮೋದಲ್ಲಿ ಮೂರು ದಿನಗಳ ಕಾಲ ಭರ್ಜರಿಯಾಗಿ ಎಂಗೇಜ್ಮೆಂಟ್ ಔತಣಕೂಟವನ್ನು ಆಯೋಜಿಸಲಾಗಿದೆ. ಇಶಾ ಮತ್ತು ಆನಂದ್ ಪಿರಮಾಲ್ ಜೋಡಿಯ ಈ ವಿವಾಹ ನಿಶ್ಚಯ ಕಾರ್ಯದಲ್ಲಿ ಭಾಗವಹಿಸಲು ಖ್ಯಾತನಾಮರ ಭಾರೀ ದಂಡು ಈಗ ಇಟಲಿಗೆ ತೆರಳಿದೆ.

ವಾರಾಂತ್ಯದಲ್ಲಿ ನಡೆಯಲಿರುವ ಡಿನ್ನರ್ ಪಾರ್ಟಿಯಲ್ಲಿ ಹಲವು ಬಾಲಿವುಡ್ ಗಣ್ಯರು ಇಶಾ ಮತ್ತು ಆನಂದ್ ಪಿರಮಾಲ್ ಜೋಡಿಗೆ ಶುಭಾಶಯ ಹೇಳೋದಕ್ಕಂತಾನೇ ಇಟಲಿಗೆ ಹಾರಿದ್ದಾರೆ. ಸೋನಮ್ ಕಪೂರ್, ಖುಷಿ ಮತ್ತು ಜಾಹ್ನವಿ ಕಪೂರ್, ಕರಣ್ ಜೋಹರ್, ಮನೀಶಾ ಮಲ್ಹೋತ್ರಾ ಸೇರಿದಂತೆ ಹಲವರು ಇಟಲಿಯ ಲೇಕ್ ಕಮೋಗೆ ತೆರಳುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಷ್ಟೇ ವಿವಾಹ ನಿಶ್ಚಿತಾರ್ಥದಲ್ಲಿ ಒಂದಾಗಿರೋ ಜೋಡಿ ಈ ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯುವ ಸಾಧ್ಯತೆ ಇದೆ. ಭಾರತದಲ್ಲೇ ಮದುವೆ ನಡೆಯುತ್ತಾ ಅಥವಾ ವಿದೇಶದಲ್ಲಿ ನಡೆಯುತ್ತಾ ಅನ್ನೋದ್ರ ಬಗ್ಗೆ ಇನ್ನು ಅಂಬಾನಿ ಕುಟುಂಬ ಯಾವುದೇ ಸೂಚನೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...