alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಿರಾತಕ’ ಚಿತ್ರದ ಮುಂದಿನ ಭಾಗಕ್ಕೆ ತಾತ್ಕಾಲಿಕ ಬ್ರೇಕ್?

ಯಶ್ ಅಭಿನಯದ ಕೆಜಿಎಫ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲೂ ಭಾರಿ ಸದ್ದು ಮಾಡಿ ದಾಖಲೆಗಳನ್ನು ಬರೆದಿರುವ ಹಿನ್ನೆಲೆಯಲ್ಲಿ ಯಶ್ ಅವರ ಮುಂದಿನ ಚಿತ್ರ ಸಹಜವಾಗಿಯೇ ಕುತೂಹಲವನ್ನು ಹುಟ್ಟಿಸಿದೆ.

ಜೊತೆಗೆ ಆ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ತೆರೆಕಂಡ ‘ಕಿರಾತಕ’ ಸಿನಿಮಾದ ಮುಂದಿನ ಸರಣಿಗೆ ಯಶ್ ಸದ್ಯ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿರ್ದೇಶಕ ಅನಿಲ್ ಕುಮಾರ್ ಇಷ್ಟೊತ್ತಿಗಾಗಲೇ ಕಿರಾತಕ ಭಾಗ ಎರಡನ್ನು ಪ್ರಾರಂಭಿಸಬೇಕಿತ್ತು. ಆದರೆ, ಕೆಜಿಎಫ್ ದಾಖಲೆಯಿಂದ ಮುಂದಿನ ಸಿನಿಮಾ ಬಹಳ ನಿರೀಕ್ಷೆಯನ್ನು ಹುಟ್ಟಿಸುವ ಕಾರಣಕ್ಕೆ ಅದರ ತಯಾರಿಗಾಗಿ ಸದ್ಯಕ್ಕೆ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಅನಿಲ್ ಕುಮಾರ್ ತಮ್ಮ ಮುಂದಿನ ಯೋಜನೆಯಾದ ‘ದಾರಿ ತಪ್ಪಿದ ಮಗ’ ಚಿತ್ರದತ್ತ ಹೊರಳಿದ್ದಾರೆ. ಇದರಲ್ಲಿ ಧಿರೇನ್ ರಾಜ್ ಕುಮಾರ್ ಮತ್ತು ಮಾನ್ವಿತಾ ಹರೀಶ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...