alex Certify
ಕನ್ನಡ ದುನಿಯಾ       Mobile App
       

Kannada Duniya

ರಂಗೀಲಾ ನಟಿ ಊರ್ಮಿಳಾ ದಾಂಪತ್ಯದಲ್ಲಿ ಬಿರುಕು…?

ರಂಗೀಲಾ ಚಿತ್ರದಲ್ಲಿ ತನ್ನ ಮನಮೋಹಕ ನಟನೆಯಿಂದ ಅಪಾರ ಅಭಿಮಾನಿಗಳ ಮನ ಗೆದ್ದಿದ್ದ ಊರ್ಮಿಳಾ ಮಾತೋಂಡ್ಕರ್, ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಲ್ಲಿರೋದು, ಚಿತ್ರಕ್ಕೆ ಸಂಬಂಧಿಸಿದ ವಿಚಾರಕ್ಕಂತೂ ಅಲ್ಲವೇ ಅಲ್ಲ. ವೈಯಕ್ತಿಕ ವಿಚಾರದಿಂದ ಈ ಬಾರಿ ರಂಗೀಲಾ ನಟಿ ಸುದ್ದಿಯಲಿದ್ದಾರೆ.

ಉದ್ಯಮಿ ಮೋಸಿನ್ ಕಸ್ತರ್ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಣ್ಣದ ಬದುಕಿನಿಂದ ದೂರವಿದ್ದ ಊರ್ಮಿಳಾ ಇದೀಗ ಬಿಟೌನ್ ನಲ್ಲಿ ಮತ್ತೆ ಸ್ಟೆಪ್ ಹಾಕಿದ್ದರು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಈಗ ಬಂದ ಸುದ್ದಿಯ ಪ್ರಕಾರ ಊರ್ಮಿಳಾರ ದಾಂಪತ್ಯದಲ್ಲಿ ಬಿರುಕು ಬಿಟ್ಟಿರೋದು ತಿಳಿದುಬಂದಿದೆ.

ಊರ್ಮಿಳಾರ ಪತಿ ಮುಂಗೋಪಿ. ಹೀಗಾಗಿ ನಟಿಗೆ ಕಿರುಕುಳ ಆಗುತ್ತಿದೆಯಂತೆ. ಇನ್ನು ಊರ್ಮಿಳಾ ಎಲ್ಲಿಯೂ ಕಾಣದೇ, ಮನೆಯ ನಾಲ್ಕು ಗೋಡೆಗಳ ಮಧ್ಯೆ, ಪತಿಯ ಕಿರುಕುಳ ಸಹಿಸಿಕೊಂಡಿದ್ದರು. ತಮ್ಮ ಮನದಲ್ಲಿ ಬೆಂಕಿಯನ್ನು ಇಟ್ಟುಕೊಂಡು, ಪ್ರಶಸ್ತಿ ಸಮಾರಂಭಗಳಿಗೆ ನಗುತ್ತಲೇ ಹಾಜರಾಗುತ್ತಿದ್ದರು. ಆಗಲೂ ಈ ಬಗ್ಗೆ ಏನು ತುಟಿ ಬಿಚ್ಚಿರಲಿಲ್ಲ.

ದಾಂಪತ್ಯ ಜೀವನದಲ್ಲಿ ಎದ್ದ ಬಿರುಗಾಳಿಯ ಬಗ್ಗೆ ದಂಪತಿ ಮೌನ ಮುರಿದಿಲ್ಲ. ಆದ್ರೆ, ಈ ಮುಸುಕಿನ ಹಗ್ಗಜಗ್ಗಾಟ ಎಲ್ಲಿಗೆ ಕೊನೆಯಾಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...