alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಶ್ರೀದೇವಿಗೆ ಲಭಿಸಿತಾ ಅತ್ಯುತ್ತಮ ನಟಿ ಪ್ರಶಸ್ತಿ?

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ದಿವಂಗತ ನಟಿ ಶ್ರೀದೇವಿ ಅವರಿಗೆ ‘ಮಾಮ್’ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಆದರೆ ಆಕೆ ಒಳ್ಳೆಯ ನಟಿ, ಅತ್ಯುತ್ತಮ ಅಭಿನಯಗಾರ್ತಿ ಎಲ್ಲವೂ ಸರಿ. ಆದರೆ ಶ್ರೀದೇವಿಗೆ ಮರಣಾನಂತರ ಲಭಿಸಿರುವ ಈ ಗೌರವದ ಬಗ್ಗೆ ಅವರ ಅಭಿಮಾನಿಗಳಿಗೆ ಸಂತೋಷವಾಗಿದ್ದರೂ, ಈ ಪ್ರಶಸ್ತಿ ನೀಡುತ್ತಿರುವುದು ಸಹಾನುಭೂತಿಯಿಂದಲಾ ಅನ್ನೋದ್ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ಆದ್ರೆ ಈ ಬಗ್ಗೆ ಜ್ಯೂರಿ ಮುಖ್ಯಸ್ಥ ಶೇಖರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹಾಗೂ ಶ್ರೀದೇವಿ ನಡುವಿನ ಬಾಂಧವ್ಯ ಈ ಪ್ರಶಸ್ತಿ ಘೋಷಣೆ ಮೇಲೆ ಪ್ರಭಾವ ಬೀರಿಲ್ಲ. ತಾನು ಜ್ಯೂರಿ ಸದಸ್ಯರಿಗೆ ಮತ್ತೊಮ್ಮೆ ವೋಟ್ ಮಾಡಲೂ ಸಹ ಹೇಳಿದ್ದೆ ಎಂಬುದಾಗಿ ತಿಳಿಸಿದ್ದಾರೆ.

ಆದರೆ ಪ್ರಶಸ್ತಿಗೆ ಅರ್ಹರಾದ ಬಹಳಷ್ಟು ನಟಿಯರಿದ್ದರು. ಆದರೂ ಮರಣಾನಂತರ ಶ್ರೀದೇವಿಗೇ ಈ ಪ್ರಶಸ್ತಿ ನೀಡಲು ಕಾರಣ ಸಹಾನುಭೂತಿಯೇ ಎಂಬುದಾಗಿ ಬಹುತೇಕ ಟ್ವಿಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...