alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ನಟನ ಜೊತೆ ಶ್ರುತಿ ಹಾಸನ್ ಡೇಟಿಂಗ್..!

shruti-mos_021617124226

ನಟಿ ಶ್ರುತಿ ಹಾಸನ್, ಮುಂಬೈ ವಿಮಾನ ನಿಲ್ದಾಣದಲ್ಲಿ ಸಖತ್ ಹ್ಯಾಂಡ್ಸಮ್ ಆಗಿರೋ ಅಪರಿಚಿತನ ಜೊತೆ ಕಾಣಿಸಿಕೊಂಡಿದ್ರು. ಎಲ್ಲರಲ್ಲೂ ಆ ಯುವಕ ಯಾರು ಅನ್ನೋ ಕುತೂಹಲ. ಅಷ್ಟಕ್ಕೂ ಆತ ಲಂಡನ್ ಮೂಲದ ನಟ ಮೈಖೆಲ್ ಕೋರ್ಸಲೆ, ಶ್ರುತಿ ಹಾಸನ್ ಬಾಯ್ ಫ್ರೆಂಡ್.

ಪರಸ್ಪರ ಇಷ್ಟಪಟ್ಟಿರೋ ಇವರಿಬ್ರೂ ಕಳೆದ 3 ತಿಂಗಳಿನಿಂದ ಡೇಟಿಂಗ್ ಮಾಡ್ತಿದ್ದಾರಂತೆ. ಶ್ರುತಿ ಹಾಗೂ ಮೈಖೆಲ್ ಮೊದಲು ಭೇಟಿಯಾಗಿದ್ದು ಲಂಡನ್ ನಲ್ಲಿ. ಮೈಖೆಲ್ ಮೂಲತಃ ಇಟಲಿಯವನು, ಲಂಡನ್ ನಲ್ಲಿ ರಂಗಭೂಮಿ ಕಲಾವಿದ. ಸದ್ಯ ಶ್ರುತಿ ‘ಬೆಹನ್ ಹೋಗಿ ತೇರಿ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರು.

ವ್ಯಾಲಂಟೈನ್ ಡೇಗಾಗಿ ಶ್ರುತಿ ಹಾಸನ್ ರನ್ನು ಭೇಟಿಯಾಗಲು ಮೈಖೆಲ್ ದೂರದ ಲಂಡನ್ ನಿಂದ ಮುಂಬೈಗೆ ಬಂದಿದ್ರು. ಮುಂಬೈನಲ್ಲಿ ಜೊತೆಯಾಗಿ ಇಬ್ಬರೂ ಓಡಾಡಿದ್ದಾರೆ. ನಿನ್ನೆ ಮೈಖೆಲ್ ಮರಳಿ ಲಂಡನ್ ಗೆ ಪ್ರಯಾಣ ಬೆಳೆಸಿದ್ರು. ಇದಕ್ಕೂ ಮೊದಲು ಶ್ರುತಿ ಹಾಸನ್, ‘ರಂಗ್ ದೇ ಬಸಂತಿ’ ಚಿತ್ರದ ನಟ ಸಿದ್ಧಾರ್ಥ್ ಜೊತೆ ಡೇಟಿಂಗ್ ನಡೆಸ್ತಾ ಇದ್ರು. ರಣಬೀರ್ ಕಪೂರ್ ಹಾಗೂ ಧನುಷ್ ಜೊತೆಗೂ ಶ್ರುತಿ ಹೆಸರು ಕೇಳಿಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...