alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಗಾಗಿ ಹಾಲಿವುಡ್ ಬಿಟ್ಟು ಬರ್ತಾಳಾ ಪ್ರಿಯಾಂಕಾ?

ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್ ನತ್ತ ಮುಖ ಮಾಡಿಲ್ಲ. ಪ್ರಿಯಾಂಕಾರ ಹೋಮ್ ಪ್ರೊಡಕ್ಷನ್ ನಲ್ಲಿ ಕೆಲ ಚಿತ್ರಗಳು ನಿರ್ಮಾಣಗೊಂಡಿದ್ದರೂ ಅವ್ಯಾವು ಬಾಲಿವುಡ್ ಚಿತ್ರಗಳಲ್ಲ.

ಹಾಲಿವುಡ್ ನ ‘ಕ್ವಾಂಟಿಕೋ’ 3 ನೇ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿದ್ದು, ಏಪ್ರಿಲ್ 26 ರಿಂದ ಇದು ಪ್ರಸಾರಗೊಳ್ಳಲಿದೆ. ಇದರ ಮಧ್ಯೆ ಬಾಲಿವುಡ್ ಚಿತ್ರರಂಗದಲ್ಲಿ ಮತ್ತೆ ತೊಡಗಿಸಿಕೊಳ್ಳುವ ಹಂಬಲದಲ್ಲಿರುವ ಪ್ರಿಯಾಂಕಾ ‘ಕ್ವಾಂಟಿಕೋ’ 4 ನೇ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.

2016 ರಲ್ಲಿ ‘ಜೈ ಗಂಗಾಜಲ್’ ಚಿತ್ರದ ಬಳಿಕ ಪ್ರಿಯಾಂಕಾ ಬಾಲಿವುಡ್ ನ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. ಈಗ ಆಲಿ ಅಬ್ಬಾಸ್ ಜಾಫರ್ ಮುಂದಿಟ್ಟಿರುವ ಆಫರ್ ಪ್ರಿಯಾಂಕಾಳನ್ನು ಆಕರ್ಷಿಸಿದೆ. ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಚಿತ್ರದ ನಾಯಕಿಯಾಗುವುದರ ಕುರಿತಂತೆ ಅಮೆರಿಕಾದಲ್ಲಿ ಆಲಿ ಅಬ್ಬಾಸ್, ಪ್ರಿಯಾಂಕಾ ಜೊತೆ ಚರ್ಚಿಸಿದ್ದು, ಇದಕ್ಕೆ ಪ್ರಿಯಾಂಕಾ ಕೂಡಾ ಯಸ್ ಅಂದಿದ್ದಾರಂತೆ. ಈ ಹಿಂದೆ ‘ಗುಂಡೇ’ ಚಿತ್ರದಲ್ಲಿ ಆಲಿ ಅಬ್ಬಾಸ್ ಜೊತೆ ಕೆಲಸ ಮಾಡಿರುವ ಪ್ರಿಯಾಂಕಾ, ‘ಭಾರತ್’ ಚಿತ್ರದ ಕುರಿತು ಆಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...