alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಚಿತ್ರ ವಿಳಂಬವಾಗಲು ಕಾರಣರಾಗಿದ್ದರಾ ಸಮಂತಾ?

ಟಾಲಿವುಡ್‌ ನ ನಾಗಚೈತನ್ಯ ಹಾಗೂ ಸಮಂತಾ ಜೋಡಿ ವಿವಾಹದ ನಂತರ ಇದೀಗ ಮತ್ತೊಂದು ವಿಚಾರದಲ್ಲಿ ಚರ್ಚೆಗೆ ಬಂದಿದೆ. ದಕ್ಷಿಣ ಭಾರತದಲ್ಲಿ ಈ ಜೋಡಿ ಬಗ್ಗೆ ಮಾತುಕತೆ ಅತಿ ಹೆಚ್ಚು. ನಾಗಚೈತನ್ಯ ಜೀವನ ಸಂಗಾತಿ ಸಮಂತಾ ಇದೀಗ, ಪತಿಯ ವೃತ್ತಿಜೀವನದ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಆರಂಭಿಸಿದ್ದಾರೆ.

ನಾಗಚೈತನ್ಯರ ಸಿನಿಮಾಗಳಲ್ಲಿ ಅಂತಿಮ ಹಂತದ ಸಂಕಲನದ ವೇಳೆ, ಸಮಂತಾ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇದೇ ಕಾರಣದಿಂದ ನಾಗಚೈತನ್ಯರ ಅತಿ ನಿರೀಕ್ಷಿತ ಚಿತ್ರ ‘ಶೈಲಜಾ ರೆಡ್ಡಿ ಅಲ್ಲುಡು’ ನಿಗದಿತ ಸಮಯದಲ್ಲಿ ಬಿಡುಗಡೆಗೆ ಅಡ್ಡಿಯಾಗಿದೆ ಎನ್ನಲಾಗ್ತಿದೆ.

ಈ ಚಿತ್ರದ ಸಂಕಲನ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಸದ್ಯಕ್ಕೆ ಚಿತ್ರತಂಡ ಅಳವಡಿಸುತ್ತಿದೆ. ಆ.31 ರಂದು ಪರದೆಯಲ್ಲಿ ಕಾಣಬೇಕಿದ್ದ ಚಿತ್ರ, ಇದೀಗ ಬಿಡುಗಡೆಯ ದಿನವನ್ನು ಮುಂದಕ್ಕೆ ಹಾಕಲಾಗಿದೆ.

ಕೇರಳದಲ್ಲಿ ಚಿತ್ರದ ರಿ ರೆಕಾರ್ಡಿಂಗ್‌ ಮಾಡಲು ಉದ್ಧೇಶಿಸಲಾಗಿತ್ತು. ಆದರೆ ಪ್ರವಾಹದ ಕಾರಣ ತಡವಾಗುತ್ತಿದೆ ಎಂದು ನಾಗಚೈತನ್ಯ ಸ್ಪಷ್ಟೀಕರಣ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...