alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ದಾರಿ ಹಿಡಿದ ಶಾಹಿದ್ ಕಪೂರ್ ಗರ್ಭಿಣಿ ಪತ್ನಿ

ಬಾಲಿವುಡ್ ನಟ ಶಾಹಿದ್ ಕಪೂರ್ ಎರಡನೇ ಬಾರಿ ತಂದೆಯಾಗ್ತಿದ್ದಾರೆ. ಪತ್ನಿ ಮೀರಾ ಕಪೂರ್ ಗರ್ಭಿಣಿಯಾಗಿದ್ದು, ಬೇಬಿ ಬಂಪ್ ನೊಂದಿಗೆ ಫೋಟೋಕ್ಕೆ ಮೀರಾ ಫೋಸ್ ನೀಡಿದ್ದಾರೆ. ಮೀರಾ ವೋಗ್ ನಿಯತಕಾಲಿಕಕ್ಕೆ ಫೋಟೋ ಶೂಟ್ ಮಾಡಿದ್ದು, ಫೋಟೋವನ್ನು ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ವೋಗ್ ನಿಯತಕಾಲಿಕದ ಜೂನ್ ಸಂಚಿಕೆಯಲ್ಲಿ ಮೀರಾ ಮಿಂಚುತ್ತಿದ್ದಾರೆ. ತುಂಬಾ ಕೂಲ್ ಆಗಿ ಕಾಣ್ತಿರುವ ಮೀರಾ 80ರ ದಶಕವನ್ನು ನೆನಪಿಸುತ್ತಾರೆ. ವೋಗ್ ನಿಯತಕಾಲಿಕಕ್ಕೆ ಮೀರಾ ಧನ್ಯವಾದ ಹೇಳಿದ್ದಾರೆ. ನಿಯತಕಾಲಿಕದ ಜೊತೆ ಮಾತನಾಡಿದ ಮೀರಾ, ಶಾಹಿದ್ ಜೊತೆ ಶಾಪಿಂಗ್ ಮಾಡೋದು ತುಂಬಾ ಇಷ್ಟ ಎಂದಿದ್ದಾರೆ.

ಮೀರಾ ಫೋಟೋ ಕರೀನಾ ಕಪೂರ್ ಖಾನ್ ರನ್ನು ನೆನಪಿಸುತ್ತಿದೆ. ಗರ್ಭಿಣಿಯಾದ್ಮೇಲೆ ಮನೆಯಲ್ಲಿ ಕುಳಿತುಕೊಳ್ಳುವ ಟ್ರೆಂಡ್ ಬದಲಿಸಿದವರು ಕರೀನಾ. ಗರ್ಭಿಣಿಯಾಗಿದ್ದಾಗ ಫೋಟೋ ಶೂಟ್ ಜೊತೆ ರ್ಯಾಂಪ್ ವಾಕ್ ಮಾಡಿ ಸದ್ದು ಮಾಡಿದ್ದರು. ಬಾಲಿವುಡ್ ಬೇಬೋ ದಾರಿಯನ್ನು ಅನೇಕರು ತುಳಿದಿದ್ದಾರೆ. ಮೀರಾ ಕೂಡ ಬೇಬಿ ಬಂಪ್ ಮುಚ್ಚಿಡದೆ ಕ್ಯಾಮರಾಕ್ಕೆ ಫೋಸ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...