alex Certify
ಕನ್ನಡ ದುನಿಯಾ       Mobile App
       

Kannada Duniya

ಸುನೀಲ್ ರನ್ನು ಮಿಸ್ ಮಾಡಿಕೊಳ್ತಿದ್ದಾರಾ ಕಪಿಲ್ ಶರ್ಮಾ?

ಕಳೆದ ವಾರವಷ್ಟೇ ಕಾಮಿಡಿಯನ್ ಕಪಿಲ್ ಶರ್ಮಾ ಹೊಸ ಶೋ ಫ್ಯಾಮಿಲಿ ಟೈಂ ವಿತ್ ಕಪಿಲ್ ಶರ್ಮಾ ಪ್ರಸಾರವಾಗಿದೆ. ಆದರೆ ಈ ಹೊಸ ಶೋ ಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ಬಂದಿಲ್ಲ. ಬಹುಶಃ ಕಪಿಲ್ ಶರ್ಮಾ ಅಭಿಮಾನಿಗಳು ಇನ್ನಷ್ಟು ಹೊಸತನವನ್ನು ಬಯಸಿದ್ದರೇನೋ….ಅಥವಾ ಬಹಳಷ್ಟು ಮಂದಿ ಕಪಿಲ್ ನ ಹಳೇ ಟೀಂ ಸದಸ್ಯರನ್ನು ನೋಡಲು ಬಯಸಿದ್ದರು ಅನ್ನೋದು ಸುಳ್ಳಲ್ಲ.

ಬಹುಶಃ ಕಪಿಲ್ ಶರ್ಮಾ ಕೂಡ ತಮ್ಮ ಹಳೆಯ ಟೀಂ ಸದಸ್ಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಟ್ವೀಟ್ ಕೂಡ ಇದನ್ನು ಸಾರಿ ಹೇಳುತ್ತಿದೆ. ತಾವು ಹಳೆದ ಸದಸ್ಯರನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿರೋದಾಗಿ ಹಾಗೂ ಕಾಮಿಡಿ ನೈಟ್ಸ್ ಶೂಟಿಂಗ್ ನಡೆಯುತ್ತಿದ್ದ ಜಾಗದಲ್ಲೇ ಹೊಸ ಶೋ ಚಿತ್ರೀಕರಣ ಕೂಡ ನಡೆಯುತ್ತಿದೆ. ನೀವಿಲ್ಲದೇ ಹೇಗೆ ಶೂಟಿಂಗ್ ನಡೆಸುತ್ತಿದ್ದೀನೋ ಅದು ನನಗೆ ಮಾತ್ರ ಗೊತ್ತು ಎಂದು ಕಪಿಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ ನಡೆದ ಜಗಳದಿಂದಾಗಿ ಕಾಮಿಡಿ ನೈಟ್ಸ್ ಟೀಂ ಒಡೆದು ಹೋಳಾಗಿತ್ತು. ಇದಾದ ಬಳಿಕ ಇವರಿಬ್ಬರೂ ಒಂದಾಗಿ ಶೋ ಗೆ ಮರಳುತ್ತಾರೆ ಅನ್ನೋ ಅಭಿಮಾನಿಗಳ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...