alex Certify
ಕನ್ನಡ ದುನಿಯಾ       Mobile App
       

Kannada Duniya

ನಾದಿನಿ ಶ್ವೇತಾ ಜೊತೆ ಸರಿಯಿಲ್ವಾ ಅತ್ತಿಗೆ ಐಶ್ ಸಂಬಂಧ…?

ಬಾಲಿವುಡ್ ನ ಪ್ರಸಿದ್ಧ ಕುಟುಂಬಗಳಲ್ಲಿ ಬಚ್ಚನ್ ಕುಟುಂಬವೂ ಒಂದು. ನಾವೆಲ್ಲ ಒಂದಾಗಿದ್ದೇವೆ ಎಂದು ಸಾರುವ ಈ ಕುಟುಂಬದಲ್ಲಿ ಬಿರುಕು ಮೂಡಿದ್ಯಾ? ಹೀಗೊಂದು ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಎದ್ದಿದೆ. ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸೊಸೆ ಐಶ್ವರ್ಯ ರೈ ಬಚ್ಚನ್ ಬರದೆ ಇರುವುದು ಇದಕ್ಕೆ ಕಾರಣವಾಗಿದೆ.

ಈ ಹಿಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದ ಶ್ವೇತಾ ಹಾಗೂ ಐಶ್ವರ್ಯ ಕೆಲ ದಿನಗಳಿಂದ ದೂರವಾಗ್ತಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಫೋಟೋಕ್ಕೆ ಫೋಸ್ ನೀಡ್ತಿಲ್ಲ. ಶ್ವೇತಾ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿಯೂ ಐಶ್ ಕಾಣಿಸಿಕೊಂಡಿಲ್ಲ.

ಆದ್ರೆ ಇದಕ್ಕೆ ನಾದಿನಿ-ಅತ್ತಿಗೆ ಮಧ್ಯೆ ಮೂಡಿರುವ ಮುನಿಸು ಕಾರಣ ಎನ್ನಲು ಸಾಧ್ಯವಿಲ್ಲ. ಯಾಕೆಂದ್ರೆ ಐಶ್ ಮಗಳು ಆರಾಧ್ಯ ಹಾಗೂ ಪತಿ ಅಭಿಷೇಕ್ ಜೊತೆ ಚೆನ್ನೈನಲ್ಲಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಪಂದ್ಯದಲ್ಲಿ ಅವ್ರು ಭಾಗಿಯಾಗಿದ್ದಾರೆ. ಇದೇ ಕಾರಣಕ್ಕೆ ಶ್ವೇತಾ ಕಾರ್ಯಕ್ರಮಕ್ಕೆ ಅವ್ರು ಗೈರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...