alex Certify
ಕನ್ನಡ ದುನಿಯಾ       Mobile App
       

Kannada Duniya

ಇರ್ಫಾನ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ಸಾಕಷ್ಟು ಹಿಟ್ ಚಿತ್ರಗಳನ್ನು ಬಾಲಿವುಡ್ ಗೆ ನೀಡಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಇರ್ಫಾನ್ ಖಾನ್ ಸದ್ಯ ನ್ಯೂರೋ ಎಂಡೋ ಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಲಂಡನ್ ನಲ್ಲಿ ಕಳೆದ ನಾಲ್ಕು ತಿಂಗಳಿಂದ ಅವ್ರು ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯೂರೋ ಎಂಡೋ ಕ್ರೈನ್ ಟ್ಯೂಮರ್ ಬಗ್ಗೆ ಇರ್ಫಾನ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ವಿಷ್ಯ ಕೇಳಿ ಅಭಿಮಾನಿಗಳೊಂದೇ ಅಲ್ಲ ಬಾಲಿವುಡ್ ಕಲಾವಿದರು ದುಃಖ ವ್ಯಕ್ತಪಡಿಸಿದ್ದರು. ಜೊತೆಗೆ ಇರ್ಫಾನ್ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಮಾಡಿದ್ದರು. ಧೈರ್ಯ ಕಳೆದುಕೊಳ್ಳದಂತೆ ಸಲಹೆ ನೀಡಿದ್ದರು.

ಧೈರ್ಯವಾಗಿ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ವಿರುದ್ಧ ಹೋರಾಟ ನಡೆಸುತ್ತಿರುವ ಇರ್ಫಾನ್, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಇರ್ಫಾನ್ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದೆಯಂತೆ. ಶೀಘ್ರವೇ ಇರ್ಫಾನ್ ಭಾರತಕ್ಕೆ ವಾಪಸ್ ಆಗಲಿದ್ದಾರಂತೆ. ಹಿಂದಿ ಮೀಡಿಯಂ ಸೀಕ್ವೆಲ್ ನಲ್ಲಿ ಇರ್ಫಾನ್ ಕಾಣಿಸಿಕೊಳ್ಳಲಿದ್ದಾರಂತೆ. ಹಿಂದಿ ಮೀಡಿಯಂ ಸೀಕ್ವೆಲ್ ನಲ್ಲಿ ಇರ್ಫಾನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಇರ್ಫಾನ್ ಖಾನ್ ಅಭಿನಯದ ಬ್ಲಾಕ್ಮೇಲ್ ಹಾಗೂ ಕರ್ವಾನ್ ಈಗಾಗಲೇ ತೆರೆಗೆ ಬಂದಿದೆ. ಆದ್ರೆ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಈ ಎರಡೂ ಚಿತ್ರ ಉತ್ತಮವಾಗಿದೆ. ಆದ್ರೆ ಚಿತ್ರದ ಪ್ರಚಾರಕ್ಕೆ ಇರ್ಫಾನ್ ಬರದೆಯಿರುವುದು ಚಿತ್ರದ ಹಿನ್ನೆಡೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...